Latest Kannada Nation & World
ವೈಷ್ಣವ್ ಎದುರೇ ಬಯಲಾಯ್ತು ಸತ್ಯ; ಕಾವೇರಿ ಮಾಡಿದ ಕೆಟ್ಟ ಕೆಲಸದ ಬಗ್ಗೆ ಎಲ್ಲರ ಮುಂದೆ ಸಾಕ್ಷಿ ಸಮೇತ ಮಾತನಾಡಿದ ಕೀರ್ತಿ

ಈಗ ಮತ್ತೆ ಬದುಕಿಬಂದ ರೀತಿಯಲ್ಲಿ ಸಾವನ್ನು ಗೆದ್ದು ಕೀರ್ತ ವೈಷ್ಣವ್ ಮನೆಗೆ ಬಂದಿದ್ದಾಳೆ. ಅವಳನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ವೈಷ್ಣವ್ ಕೂಡ ತುಂಬಾ ಶಾಕ್ ಆಗಿದ್ದಾನೆ. “ವೈಷ್ಣವ್ ನೀನು ನಿನ್ನ ತಾಯಿ ಎಂದು ಎಲ್ಲವನ್ನೂ ಕಣ್ಣು ಮುಚ್ಚಿ ನಂಬಬೇಡ” ಎಂದು ಕೀರ್ತಿ ಹೇಳುತ್ತಾಳೆ. ನಂತರ ಅಂದು ಯಾರು ಕೀರ್ತಿಯನ್ನು ಕಿಡ್ನಾಪ್ ಮಾಡಿದ್ದರೋ ಆ ಎಲ್ಲಾ ರೌಡಿಗಳನ್ನು ಕರೆಸುತ್ತಾಳೆ. ಕರೆಸಿ ಅವರ ಹತ್ತಿರವೇ ಸಾಕ್ಷಿ ಹೇಳಿಸಿದ್ದಾಳೆ. ಹೌದು ಅಂದು ನಮಗೆ ಸುಪಾರಿ ಕೊಟ್ಟಿರೋದು ಇದೇ ಕಾವೇರಿ. ಅವರಿಗೆ ಕೀರ್ತಿ ಸಾಯಬೇಕಿತ್ತು, ಲಕ್ಷ್ಮೀ ಜೈಲಿಗೆ ಹೋಗಬೇಕಿತ್ತು ಎಂದು ಹೇಳಿದ್ದಾರೆ.