Astrology
ಶನಿಯ ನಕಾರಾತ್ಮಕ ಪ್ರಭಾವ ಕಡಿಮೆ ಮಾಡಲು ಏನು ಮಾಡಬೇಕು, ಏನು ಮಾಡಬಾರದು; ಈ ವಿಷಯಗಳನ್ನು ಗಮನಿಸಿ

ಶನಿ ಮತ್ತು ಧರ್ಮ
ಶನಿಯ ಬಗ್ಗೆ ಹೇಳಲಾದ ಮುಖ್ಯವಾದ ಬೋಧನೆಯಲ್ಲಿ ಕರ್ತವ್ಯನ್ನು ಪಾಲಿಸುವುದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆದ್ದರಿಂದ ಶನಿಯು ಕರ್ತವ್ಯ, ತತ್ವ ಮತ್ತು ಮೌಲ್ಯಗಳಿಗೆ ಮಾರ್ಗದರ್ಶವನ್ನು ನೀಡುತ್ತಾನೆ. ನಾವು ಕರ್ತವ್ಯವನ್ನು ಗೌರವಿಸಿದಾಗ, ನಮ್ಮ ಜೀವನದ ಉದ್ದೇಶವನ್ನು ಪೂರೈಸುವ ಮತ್ತು ಸಾಮರ್ಥ್ಯವನ್ನು ತೋರಿಸುವತ್ತ ಸಾಗುತ್ತೇವೆ. ಈ ಪ್ರಯತ್ನಗಳನ್ನು ಶನಿಯು ಬೆಂಬಲಿಸುತ್ತಾನೆ ಮತ್ತು ಪ್ರತಿಫಲವನ್ನು ನೀಡುತ್ತಾನೆ. ಇದಕ್ಕೆ ವಿರುದ್ಧವಾಗಿ ನಾವು ನಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದರೆ ಮತ್ತು ಸ್ವಾರ್ಥ, ಬೇಜವಾಬ್ದಾರಿ, ಇತರರಿಗೆ ತೊಂದರೆ ಕೊಡುವುದು ಮಾಡಿದರೆ, ಶನಿಯು ಅವರಿಗೆ ತೊಂದರೆ, ಹಿನ್ನಡೆಗಳನ್ನು ಪರಿಚಯಿಸುತ್ತಾನೆ ಎಂದು ನಂಬಲಾಗಿದೆ. ಅವನು ಸವಾಲುಗಳನ್ನು ನೀಡಿ ಪಾಠಕಲಿಸುತ್ತಾನೆ. ಇದರಿಂದ ತಪ್ಪು ದಾರಿಯಲ್ಲಿ ನಡೆಯುತ್ತಿದ್ದವರು ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನು ನೀಡುತ್ತಾನೆ.