Latest Kannada Nation & World
ಶಾರ್ಟ್ ಇದ್ದೀನಿ ಅನ್ನೋ ಕಾರಣಕ್ಕೆ ಸೀರಿಯಲ್‌ಗಳಿಂದ ರಿಜೆಕ್ಟ್ ಮಾಡಿದವರೇ ಹೆಚ್ಚು; ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಅಮೋಘ್ ಆದಿತ್ಯ ಸಂದರ್ಶನ

- ಸೀರಿಯಲ್ ಜರ್ನಿ ಶುರುವಾಗಿದ್ದು ಹೇಗೆ..
– ನಾನು ಡಿಗ್ರಿ ಮಾಡುವಾಗ, ಒಂದು ಸಿನಿಮಾ ಅದು ಕಾರಣಾಂತರಗಳಿಂದ ಸಿನಿಮಾ ಆಗಲಿಲ್ಲ. ಅದಾದ ಬಳಿಕ ರಾಮಾರ್ಜುನ ಅಂತ ಇನ್ನೊಂದು ಸಿನಿಮಾ ಮಾಡಿದೆ. ಜತೆ ಜತೆಗೆ ರಂಗಭೂಮಿಯ ಕೆಲಸ ಮಾಡುತ್ತ, ಸಿನಿಮಾದ ಡೈರೆಕ್ಷನ್ ಟೀಮ್‌ನಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದೆ. ಶಾಂತಂ ಪಾಪಂ ಸೀರಿಯಲ್‌ನಿಂದ ನನ್ನ ನಟನೆ ಆರಂಭವಾಯ್ತು. ಒಂದೇ ದಿನದ ಪಾತ್ರ ಮಾಡುತ್ತಿದ್ದೆ. ಅದಾದ ಮೇಲೆ ಹೂಮಳೆ ಸೀರಿಯಲ್‌ನಲ್ಲಿ ನಟಿಸಲು ಶುರುಮಾಡಿದೆ. ದೊರೆಸಾನಿ, ಸತ್ಯ, ಗೀತಾದಲ್ಲಿ ಸೈಕೋಪಾತ್ ವಿಲನ್ ಆಗಿ, ಅಂತರಪಟದಲ್ಲೂ ವಿಲನ್, ಲಕ್ಷ್ಮೀ ಟಿಫನ್ ರೂಂ ಸೀರಿಯಲ್‌ನಲ್ಲೂ ನಟಿಸಿದೆ. ಇವೆಲ್ಲ ಮಾಡುವಾಗಲೇ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಅವಕಾಶ ಸಿಕ್ಕಿತು”