Astrology
ಶಿವನಿಗೆ ಜಲಾಭಿಷೇಕ ಏಕೆ ಪ್ರಿಯ, ಅಭಿಷೇಕ ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು?
ಶಿವನನ್ನು ಮೆಚ್ಚಿಸಲು ಕಠೋರ ತಪಸ್ಸು ಮಾಡಬೇಕಾಗಿಲ್ಲ, ಕಠಿಣ ಉಪವಾಸಗಳ ಅಗತ್ಯವಿಲ್ಲ ಎಂದು ಪುರಾಣಗಳು ಹೇಳುತ್ತವೆ, ನೀವು ಭಕ್ತಿಯಿಂದ ಅವನಿಗೆ ಜಲಾಭಿಷೇಕ ಮಾಡಿದರೆ, ಶಿವನು ಪ್ರಸನ್ನನಾಗಿ ವರಗಳನ್ನು ನೀಡುತ್ತಾನೆ. ಆದ್ದರಿಂದಲೇ ಶಿವನನ್ನು ಅಭಿಷೇಕಪ್ರಿಯ ಎಂದು ಕರೆಯುತ್ತಾರೆ. ಶಿವನಿಗೆ ಜಲಾಭಿಷೇಕ ಮಾಡುವುದರಿಂದ ಹೃದಯ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಪವಿತ್ರಗೊಳಿಸುತ್ತದೆ. ಪಾಪಗಳು ಕಳೆಯುತ್ತವೆ. ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ನಕಾರಾತ್ಮಕ ಶಕ್ತಿಗಳು ದೂರಾಗುತ್ತವೆ. ಶಿವನಿಗೆ ಮಾಡುವ ಅಭಿಷೇಕಕ್ಕೆ ಪ್ರಕೃತಿ ವಿಕೋಪದಿಂದ ರಕ್ಷಿಸುವ ಶಕ್ತಿ ಇದೆ ಎಂಬುದು ಭಕ್ತರ ನಂಬಿಕೆಯಾಗಿದೆ .