Astrology
ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲ, ಸರಿಯಾದ ಕ್ರಮ ತಿಳಿದುಕೊಳ್ಳಿ-ancient wisdom five powerful mantras for protection from evil eye and dark magic spiritual safeguard tips uks ,ರಾಶಿ ಭವಿಷ್ಯ ಸುದ್ದಿ

ದೃಷ್ಟಿ ದೋಷ ನಿವಾರಣೆಗಾಗಿ ನಿತ್ಯವೂ ಜಪಿಸಬಹುದಾದ ಮಂತ್ರಗಳಿವು
1) ಓಂ ನಮಃ ಶಿವಾಯ
ಓಂ ನಮಃ ಶಿವಾಯ – ನಾನು ಶಿವನಿಗೆ ನಮಸ್ಕರಿಸುತ್ತೇನೆ ಎಂಬುದು ಇದರ ಅರ್ಥ. ಶಿವನಿಗೆ ಸಮರ್ಪಿತವಾದ ಸರಳ ಮತ್ತು ಶಕ್ತಿಶಾಲಿ ಮಂತ್ರಗಳಲ್ಲಿ ಇದೂ ಒಂದು. ಶಿವನಿಗೆ ಶರಣಾಗುವುದರಿಂದ, ಆತನೇ ನಮ್ಮನ್ನು ಯಾವುದೇ ವಾಮಾಚಾರ ಅಥವಾ ದುಷ್ಟ ಕಣ್ಣಿನಿಂದ ತೊಂದರೆಯಾಗದಂತೆ ರಕ್ಷಿಸುತ್ತಾನೆ. ಭಗವಾನ್ ಶಿವನು ಆದಿಯೋಗಿ, ಪರಮ ತಪಸ್ವಿ, ಸರ್ವಶಕ್ತ. ಅವನನ್ನು ಆಶ್ರಯಿಸಿದರೆ ಖಂಡಿತವಾಗಿಯೂ ರಕ್ಷಿಸುತ್ತಾನೆ. ನೀವು ಯಾವುದೇ ನಕಾರಾತ್ಮಕ ಶಕ್ತಿಯಿಂದ ಬಳಲುತ್ತಿದ್ದರೆ ಬೆಳಿಗ್ಗೆ ಸ್ನಾನದ ನಂತರ ಪೂಜಾ ಕೋಣೆಯಲ್ಲಿ ಕುಳಿತುಕೊಳ್ಳಿ. ದೇವರ ದೀಪ ಬೆಳಗಿಸಿ. ಅದಾಗಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜೋರಾಗಿ 108 ಬಾರಿ ಜಪಿಸಿ. ದೇವರಿಗೆ ಆರತಿ ಎತ್ತಿ.