Latest Kannada Nation & World
ಗೂಳಿಗಳ ಬಳಗಕ್ಕೆ ಹ್ಯಾಟ್ರಿಕ್ ಸೋಲಿನ ಕಹಿ; ಯುಪಿ ಯೋಧಾಸ್ ವಿರುದ್ಧ 57-36 ಅಂಕಗಳಿಂದ ಸೋತ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯಲ್ಲಿ ಗೂಳಿಗಳು ಗುಮ್ಮೋದನ್ನು ಮರೆತಿರುವಂತಿದೆ. ಹಲವು ಹೊಸತನಗಳೊಂದಿಗೆ ಪಿಕೆಎಲ್ 2024ರ ಆವೃತ್ತಿಗೆ ಕಾಲಿಟ್ಟ ಬೆಂಗಳೂರು ಬುಲ್ಸ್, ಹ್ಯಾಟ್ರಿಕ್ ಸೋಲುಗಳೊಂದಿಗೆ ಆರಂಭದಲ್ಲೇ ಭಾರಿ ಹಿನ್ನಡೆ ಅನುಭವಿಸಿದೆ. ಯುಪಿ ಯೋಧಾಸ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡವು 57-36 ಅಂಕಗಳ ಅಂತರದಿಂದ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಆಡಿದ ಮೊದಲ ಮೂರೂ ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಖಾತೆ ತೆರಯುವಲ್ಲಿ ವಿಫಲವಾಗಿದೆ.