Astrology
ಸಂಪತ್ತು, ವಿದ್ಯಾಬುದ್ಧಿ ನೀಡುವ ಶ್ರೀ ಹಯಗ್ರೀವ ಯಂತ್ರದ ಮಹಿಮೆ ಅಪಾರ; ಇದನ್ನು ಪೂಜಿಸುವ ಸರಿಯಾದ ಕ್ರಮ ಹೇಗೆ ನೋಡಿ

ಹಯಗ್ರೀವ ಯಂತ್ರದ ಪೂಜೆಯಿಂದ ಸಿಗುವ ಲಾಭ
ಆದ್ದರಿಂದ ಹಯಗ್ರೀವ ಯಂತ್ರವನ್ನು ಧರಿಸಿದಲ್ಲಿ ವಿದ್ಯಾರ್ಜನೆಯಲ್ಲಿನ ಅಡ್ಡಿ ಆತಂಕಗಳು ದೂರವಾಗುತ್ತವೆ. ಕಷ್ಟದ ಸನ್ನಿವೇಶದಲ್ಲಿಯೂ ಬುದ್ಧಿವಂತಿಕೆಯಿಂದ ವರ್ತಿಸಲು ಸಾಧ್ಯವಾಗುತ್ತದೆ. ವೇದ ಜೋತಿಷ್ಯಶಾಸ್ತ್ರಗಳನ್ನು ಅಧ್ಯಯನ ಮಾಡುವ ವೇಳೆ ಇದು ಹೆಚ್ಚು ಸಹಕಾರಿಯಗುತ್ತದೆ. ಶ್ರೀ ಹಯಗ್ರೀವ ಯಂತ್ರದ ಬಳಕೆಯಿಂದ ಬುದ್ಧಿವಂತಿಕೆ ಮತ್ತು ಉತ್ತಮ ಜ್ಞಾನವನ್ನು ಪಡೆಯಬಹುದು. ಇದು ಅವರು ದೈವಿಕತೆ, ಉತ್ಸಾಹ ಮತ್ತು ಗೂಢವಿಧ್ಯೆಯ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಕೇವಲ ವಿದ್ಯಾಬುದ್ಧಿ ಮಾತ್ರವಲ್ಲದೆ ಹಯಗ್ರೀವ ಯಂತ್ರ ಸಂಪತ್ತನ್ನು ಸಹ ನೀಡುತ್ತದೆ. ಇದರಿಂದ ನಮ್ಮ ಆಲೋಚನಾ ಶಕ್ತಿಯು ಹೆಚ್ಚಿತ್ತದೆ. ನಮ್ಮಲ್ಲಿನ ಋಣಾತ್ಮಕ ಶಕ್ತಿಯು ಕಡಿಮೆಯಾಗಿ ಧನಾತ್ಮಕ ಶಕ್ತಿಯು ಹೆಚ್ಚುತ್ತದೆ.