Astrology
ಸದ್ಯದಲ್ಲೇ ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ, ಇದರಿಂದ ಏನೆಲ್ಲಾ ಪರಿಣಾಮಗಳಾಗಲಿವೆ ನೋಡಿ

ಶನಿ ಸಾಡೇಸಾತಿಯ ಬಗ್ಗೆ ಜನರಲ್ಲಿ ಭಯವಿರುವುದು ಸಹಜ. ಇದರಿಂದ ಕೆಟ್ಟದ್ದಾಗುತ್ತದೆ ಎಂಬ ಭಾವನೆ ಇದೆ. ಆದರೆ ಶನಿ ಸಾಡೇಸಾತಿ ಒಂದು ಶಾಪವಲ್ಲ, ಈ ಸಮಯದಲ್ಲಿ ನೀವು ಶನಿ ದೇವರಿಗೆ ಭಯಪಡಬಾರದು, ಇದು ನಮ್ಮ ರಾಶಿಗೆ ಪ್ರವೇಶ ಮಾಡುವ ಇತರ ಗ್ರಹಗಳಂತೆ ಒಂದು ಸ್ಥಿತಿಯಾಗಿದೆ, ಆದರೆ ಸಾಡೇಸಾತಿ ಸಮಯದಲ್ಲಿ ನಾವು ಶಿಸ್ತಿನಿಂದ ಇರಬೇಕು. ಈ ಸಮಯದಲ್ಲಿ ಆಧ್ಯಾತ್ಮದ ಮೇಲೆ ನಂಬಿಕೆ ಇಡಬೇಕು. ಆದರೆ ಆತಂಕ, ಭಯ ಪಡುವುದರಿಂದ ಅರ್ಥವಿಲ್ಲ.