Latest Kannada Nation & World
‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ
ವಿಷ್ಣುವರ್ಧನ್, ಅಂಬರೀಶ್ ಕೊನೆಯ ಚಿತ್ರ
ಈ ಚಿತ್ರವು ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಕೊನೆಯ ಚಿತ್ರಾಗಲಿದೆ. ಅದು ಹೇಗೆಂದರೆ, ಈ ಚಿತ್ರಕ್ಕಾಗಿ ಮಲ್ಟಿಸ್ಟಾರರ್ ಹಾಡೊಂದನ್ನು ಚಿತ್ರೀಕರಿಸಲಾಗಿದ್ದು, ಇದರಲ್ಲಿ ವಿಷ್ಣುವರ್ಧನ್, ಅಂಬರೀಶ್, ಜಗ್ಗೇಶ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್, ಆದಿತ್ಯ, ರಮೇಶ್ ಅರವಿಂದ್ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದೇ ಹಾಡಿನಲ್ಲಿ ಇಷ್ಟೊಂದು ಸಂಖ್ಯೆಯ ಸ್ಟಾರ್ ನಟರು ಬೇರ್ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಹಾಡಿನಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅತಿಥಿಗಳಾಗಿ ಬಂದು ಹೋಗಿದ್ದರಿಂದ, ಇದು ಅವರಿಬ್ಬರ ಕೊನೆಯ ಚಿತ್ರವಾಗಲಿದೆ.