Latest Kannada Nation & World
ಸಿಎಸ್‌ಕೆ vs ಡಿಸಿ, ಪಂಜಾಬ್ vs ರಾಜಸ್ಥಾನ ಪಂದ್ಯಗಳ 10 ಮುಖ್ಯಾಂಶಗಳು

ಐಪಿಎಲ್ ಪಂದ್ಯಾವಳಿಯು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಇದೀಗ ಪ್ರಸಕ್ತ ಆವೃತ್ತಿಯ ಮೂರನೇ ಡಬಲ್ ಹೆಡರ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ವಾರಾಂತ್ಯ ದಿನವಾದ ಏಪ್ರಿಲ್ 5ರ ಶನಿವಾರ ಎರಡು ಪಂದ್ಯಗಳು ನಡೆಯುತ್ತಿವೆ. ದಿನದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Chennai Super Kings vs Delhi Capitals) ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (Punjab Kings vs Rajasthan Royals) ತಂಡಗಳು ಎದುರಾಗಲಿವೆ. ಪಂದ್ಯಕ್ಕೆ ಸಂಬಂಧಿಸಿದ 10 ಅಂಶಗಳು ಇಲ್ಲಿವೆ.