Latest Kannada Nation & World

ಸಿಡ್ನಿ ಟೆಸ್ಟ್‌ ಕೊನೆಯ 2 ದಿನ ಭಾರಿ ಮಳೆಯ ಮುನ್ಸೂಚನೆ; ಸರಣಿ ಸಮಬಲಗೊಳಿಸುವ ಭಾರತದ ನಿರೀಕ್ಷೆಗೆ ಹವಾಮಾನ ಅಡ್ಡಿ

Share This Post ????

ಬಾರ್ಡರ್-ಗವಾಸ್ಕರ್ ಟ್ರೋಫಿಯ (Border – Gavaskar Trophy) ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಜನವರಿ 3ರಿಂದ ಆರಂಭವಾಗಲಿದೆ. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯವು, ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 5 ಗಂಟೆಗೆ ಆರಂಭವಾಗಲಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಸರಣಿ ಸಮಬಲ ಸಾಧಿಸುವುದು ಭಾರತದ ಗುರಿ. ಆ ಮೂಲಕ ಕಳೆದ ಒಂದು ದಶಕದಿಂದ ಆಸ್ಟ್ರೇಲಿಯಾಗೆ ಬಿಟ್ಟುಕೊಡದೆ ಉಳಿಸಿಕೊಂಡಿರುವ ಬಾರ್ಡರ್-ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವುದು ಭಾರತದ ಲೆಕ್ಕಾಚಾರ. ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸುವ ಎಳ್ಳಷ್ಟು ಭರವಸೆಯೂ ತಂಡದಲ್ಲಿದೆ. ಹಾಗಿದ್ದರೆ, ಮಹತ್ವದ ಪಂದ್ಯಕ್ಕೆ ಹವಾಮಾನದ ಸಹಕಾರ ಹೇಗಿರಲಿದೆ ಎಂಬುದನ್ನು ನೋಡೋಣ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!