Latest Kannada Nation & World
ಸಿದ್ಧಾರ್ಥ್, ಆಶಿಕಾ ರಂಗನಾಥ್ ನಟನೆಯ ಮಿಸ್ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ
ಈ ಹಾಡಿನಲ್ಲಿ ಇರುವ ಕೆಲವು ಡ್ಯಾನ್ಸ್‌ಗಳು ಕಾಲೇಜು ವಾರ್ಷಿಕೋತ್ಸವದಲ್ಲಿ ಹಿಂದಿನ ಬೆಂಚಿನ ಹುಡುಗರು ಮಾಡಿರುವ ಡ್ಯಾನ್ಸ್ ನೆನಪಿಗೆ ತರಬಹುದು. ನಾಯಕ ಸಿದ್ಧಾರ್ಥ್‌ನದ್ದು ಅತಿರೇಕವಿಲ್ಲದ ಸಹಜ ನಟನೆ. ನಮ್ಮ ಕನ್ನಡದ ಹುಡುಗಿ ಆಶಿಕಾ ರಂಗನಾಥ್ “ಫ್ಯಾಮಿಲಿ ಹೆಣ್ಣು” ಮತ್ತು “ಬದಲಾದ ಹೆಣ್ಣು” ಲುಕ್‌ನಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಂತೆ ನಟಿಸಿದ್ದಾರೆ. ಇವರಿಬ್ಬರ ಜೋಡಿ ಕ್ಯೂಟ್ ಆಗಿದೆ ಎನ್ನಬಹುದು. ಗ್ರಿಬ್ಬಾನ್ ಹಾಡುಗಳು ಮನಮುಟ್ಟುವಂತೆ ಇಲ್ಲ. ಆದರೆ, ಹಿನ್ನೆಲೆ ಸಂಗೀತ ಪ್ರೇಮಮಯ, ಭಾವುಕ ಕ್ಷಣಗಳನ್ನು ಆಪ್ತವಾಗಿಸಿದೆ. ಈ ಸ್ಲೋ ಮೋಷನ್ ಸಿನಿಮಾ ಬೋರ್ ಹೊಡೆಯದಂತೆ ಸಂಕಲನವಿದೆ. ಒಟ್ಟಾರೆ ಮಿಸ್ ಯು ಸಿನಿಮಾವು ಕುಟುಂಬ ಸಮೇತ ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ಒಂದು ಬಾರಿ ನೋಡಬಹುದಾದ ಸಿನಿಮಾ. ಪ್ರೀತಿ, ಹಾಸ್ಯ, ಕೌಟುಂಬಿಕ ಮನರಂಜನೆ ಹದವಾಗಿ ಬೆರೆಸಿರುವ ಲೋಕಲ್ ಬೆಲ್ಲದ ಕಾಫಿ ಎನ್ನಬಹುದು.