Latest Kannada Nation & World
ಐಪಿಎಲ್ 2025 ಹರಾಜಿನಲ್ಲಿ ಮಾರಾಟವಾದ ಮತ್ತು ಅನ್‌ಸೋಲ್ಡ್ ಆಟಗಾರರ ಸಂಪೂರ್ಣ ಪಟ್ಟಿ

ಐಪಿಎಲ್ ಹರಾಜು 2025ರಲ್ಲಿ ವಿವಿಧ ತಂಡಗಳು ಬಲಿಷ್ಠ ಆಟಗಾರರಿಗೆ ಬಿಡ್ ಮಾಡಿವೆ. ಮುಂದಿನ ಆವೃತ್ತಿಯ ಆರಂಭಕ್ಕೂ ಮುನ್ನ ತಂಡವನ್ನು ಅಂತಿಮಗೊಳಿಸುತ್ತಿವೆ. ಹರಾಜಿನ ಮೊದಲ ದಿನ ವಿವಿಧ ತಂಡಗಳಿಗೆ ಮಾರಾಟವಾದ ಮತ್ತು ಮಾರಾಟವಾಗದೆ ಉಳಿದ ಆಟಗಾರರು ಯಾರು ಎಂಬ ಪಟ್ಟಿ ಇಲ್ಲಿದೆ. ಹಲವು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಈ ಬಾರಿ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ 27 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಇದರೊಂದಿಗೆ ಅವರು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿಗೆ ಖರೀದಿಸಿತು. ಉಳಿದಂತೆ ದೇವದತ್ ಪಡಿಕ್ಕಲ್, ಡೇವಿಡ್ ವಾರ್ನರ್ ಸೇರಿದಂತೆ ಕೆಲವು ಆಟಗಾರರು ಅನ್‌ಸೋಲ್ಡ್ ಆದರು.