Latest Kannada Nation & World
ಸುನೀತಾ ವಿಲಿಯಮ್ಸ್ ಭಾರತದ ನಂಟು ಹೇಗೆ, ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹಿರಿಮೆ

2006 ರ ಡಿಸೆಂಬರ್ 9ರಂದು, ವಿಲಿಯಮ್ಸ್ ಡಿಸ್ಕವರಿ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಬಾರಿಗೆ ಹಾರಿದರು. ಅಲ್ಲಿದ್ದಾಗ, ಅವರು ನಾಲ್ಕು ಬಾಹ್ಯಾಕಾಶ ನಡಿಗೆಗಳಲ್ಲಿ ಭಾಗಿಯಾದರು. ಒಟ್ಟು 29 ಗಂಟೆಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶ ನೌಕೆಯ ಹೊರಗೆ ನಡೆದದ್ದು ಅವರ ಹೆಜ್ಜೆ ಗುರುತು ಮೂಡಿಸಿತು. ಆಗ ಅವರು 195 ದಿನಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದು ದಾಖಲೆಯನ್ನೂ ಬರೆದರು. ಟ್ರೆಡ್‌ಮಿಲ್ ಬಳಸಿ, ಕಕ್ಷೆಯಲ್ಲಿದ್ದಾಗ ಬೋಸ್ಟನ್ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ ವಿಲಿಯಮ್ಸ್ ಎಂಬ ಹಿರಿಮೆಯೂ ಅವರದ್ದು. ಅವರು 2007ರ ಜೂನ್ 22 ರಂದು ಭೂಮಿಗೆ ಮರಳಿದರು.