Astrology
ಪ್ರಯಾಗ್ರಾಜ್ ಕೋಟೆ ಆವರಣದ ಬಡೇ ಹನುಮಾನ್ ಮಂದಿರದಲ್ಲಿ ಎಣ್ಣೆ,ಬತ್ತಿ, ಹಣತೆ ವ್ಯಾಪಾರ ಸ್ಥಳೀಯರ ಆರ್ಥಿಕ ಮೂಲ; ಹರ್ಷವರ್ಧನ ಶೀಲವಂತ ಬರಹ

ಹಣ, ಯಾವ ಯಾವ ರೂಪದಲ್ಲಿ, ಎಷ್ಟೊಂದು ಕೈಗಳಲ್ಲಿ ದಾಟಿ, ಬದಲಾಗಿ, ಆಸರೆ ಆಗಿದೆ ಯೋಚಿಸಿ. ಮನೆಯಿಂದಲೇ ಇದನ್ನೆಲ್ಲ ನಾವು ಹೊತ್ತೊಯ್ದರೆ ಪಡಬಹುದಾದ ಪಡಿಪಾಟಲು ಎಂಥದ್ದು!? ಹುಂಡಿಗೆ ಹಾಕುವವರು ಬಹಳ. ಅವರ ಭಕ್ತಿ. ಬದಲಾಗಿ, ಹೀಗೆ ನಾವು ಪ್ರವಾಸಿಗರು, ನಮ್ಮ ಭಾವವನ್ನು ಹತ್ತಾರು ಸ್ಥಳೀಯರೊಂದಿಗೆ ವ್ಯವಹರಿಸಿ, ನಮ್ಮ ದುಡಿಮೆ ಹಂಚಿಕೊಂಡರೆ.. ಒಳ್ಳೆಯತನದಲ್ಲಿ ನಂಬಿಕೆ ಬಾಳಿಸಿದಂತೆ! ಇಮ್ಮಡಿಸಿದಂತೆ! ನೂರ್ಮಡಿ ಆದಂತೆ! ನಮ್ಮ ಕೈಲಾದ ಮಟ್ಟಿಗೆ, ಅವರ ದುಡಿಮೆಗೆ ಕೈ ಜೋಡಿಸಿದಂತೆ!