ಸುಬ್ಬು ಬಳಿ ಮದನ್ ಸಾರಿ ಕೇಳುವಂತೆ ಮಾಡಿದ್ರು ಲಲಿತಾದೇವಿ; ಸೊಸೆಗಾಗಿ ಆಟೊ ಡ್ರೈವರ್ ಆದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಬಳಿ ಸಾರಿ ಕೇಳಿದ ಮದನ್
ಸುಬ್ಬು ಮೇಲೆ ಕಾಲೆತ್ತಿದ್ದ ಮದನ್ ನೋಡಿ ಕೋಪಗೊಳ್ಳುವ ಲಲಿತಾದೇವಿ ನಿನಗೆಷ್ಟು ಸೊಕ್ಕು, ಸುಬ್ಬು ಈ ಮನೆಯ ಅಳಿಯ, ವೀರುಗೆ ಇರುವಷ್ಟೇ ಅಧಿಕಾರ ಸುಬ್ಬುಗೂ ಈ ಮನೆಯ ಮೇಲಿದೆ. ನೀನ್ಯಾರು ಅವನಿಗೆ ಕೈ ಮಾಡಲು ಎಂದು ಕೋಪದಲ್ಲಿ ಕುದಿಯುತ್ತಾರೆ ಲಲಿತಾದೇವಿ. ‘ಸಾರಿ ಅಜ್ಜಿ‘ ಎಂದು ಹೇಳಿ ಅಲ್ಲಿಂದ ಹೋಗಲು ನೋಡುವ ಮದನ್‌ನನ್ನು ಬಿಡದ ಆಕೆ ‘ನನ್ನ ಮೊಮ್ಮಗನ ಬಳಿ ಸಾರಿ ಕೇಳು‘ ಎಂದು ರೋಷದಲ್ಲಿ ಹೇಳುತ್ತಾರೆ. ಅವರ ಮಾತು ಕೇಳಿ ಸುಬ್ಬು ಕಣ್ಣಲ್ಲಿ ನೀರು ಬರುತ್ತದೆ. ಸಾರಿ ಕೇಳಿ ಮದನ್ ಹೋದ ನಂತರ ಮೊಮ್ಮಗಳ ಬಗ್ಗೆ ಮಾತನಾಡುವ ಲಲಿತಾದೇವಿ ನನ್ನ ಮೊಮ್ಮಗಳು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಳು. ಅವಳು ಹುಡುಗಾಟಿಕೆ ಸ್ವಭಾವದವಳು. ಅವಳು ಸರಿ ತಪ್ಪು ಯಾವುದು ಎಂದು ಯೋಚಿಸದೇ ಕೆಲಸ ಮಾಡಿದ್ರೂ ಅವಳು ಮಾಡಿದ ಕೆಲಸ ಉದ್ದೇಶ ಸರಿ ಇರುತ್ತೆ. ಅವಳು ತಾಯಿ ಪ್ರೀತಿ ಇಲ್ಲದೇ ಬೆಳೆದವಳು, ಅವಳನ್ನು ಚೆನ್ನಾಗಿ ನೋಡ್ಕೋ ಅಂತ ಹೇಳಿ ಸುಬ್ಬು ಮನಸ್ಸು ಬದಲಾಗುವಂತೆ ಮಾಡುತ್ತಾರೆ. ಇನ್ನು ಮುಂದೆ ಯಾವತ್ತೂ ಶ್ರಾವಣಿ ಮೇಡಂ ಬೇಸರ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸುಬ್ಬು ಮನದಲ್ಲೇ ಅಂದುಕೊಳ್ಳುತ್ತಾನೆ.