Latest Kannada Nation & World
ಸೈಕೋ ಜಯಂತನ ವರ್ತನೆ ವಿರುದ್ಧ ತಿರುಗಿಬಿದ್ದ ಜಾನು; ಈ ವಾರದ ಕಿಚ್ಚನ ಚಪ್ಪಾಳೆ ಚಿನ್ನು ಮರಿಗೆ ಎಂದ ವೀಕ್ಷಕ

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಇತ್ತೀಚಿನ ಒಂದಷ್ಟು ಬೆಳವಣಿಗೆಗಳನ್ನು ನೋಡುವುದಾದರೆ, ಜಯಂತನ ಫೋನ್‌ನಲ್ಲಿ ಏನಿದೆ ಎಂದು ಆತನ ಫಿಂಗರ್ ಬಳಸಿ ಲಾಕ್ ತೆಗೆದಿದ್ದ ಜಾನುಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಫೋನ್‌ನಲ್ಲಿನ ಹಳೇ ವಿಡಿಯೋಗಳನ್ನು ನೋಡಿ ಶಾಕ್ ಆಗಿದ್ದಳು. ಪತಿ ಜಯಂತ್ ಅಜ್ಜಿಯ ಕುತ್ತಿಗೆ ಹಿಡಿದಿದ್ದು, ವೆಂಕಿಗೆ ಹೊಡೆದಿದ್ದು, ಮನೆಯಲ್ಲಿ ಅಲ್ಲಲ್ಲಿ ಫಿಕ್ಸ್ ಮಾಡಿದ್ದ ಸಿಸಿ ಕ್ಯಾಮರಾಗಳನ್ನೂ ನೋಡಿ ತಲೆ ತಿರುಗಿತ್ತು. ಮೊದಲೇ ಗರ್ಭಿಣಿ ಆಗಿದ್ದ ಜಾನು, ಶಾಕ್‌ಗೆ ಒಳಗಾಗಿ ತಲೆತಿರುಗಿ ಬಿದ್ದಿದ್ದಳು.