Latest Kannada Nation & World
ಸೋತರೂ ಸ್ಫೋಟಕ ಅರ್ಧಶತಕದೊಂದಿಗೆ ರಾಯುಡು, ರೈನಾ ದಾಖಲೆ ಮುರಿದ ರಹಾನೆ; ಕ್ರಿಸ್ಗೇಲ್ ರೆಕಾರ್ಡ್ ಸಮ

ಗೇಲ್ ದಾಖಲೆ ಸಮಗೊಳಿಸಿದ ರಹಾನೆ
ಅದೇ ಸಮಯದಲ್ಲಿ, ರಹಾನೆ ವೆಸ್ಟ್ ಇಂಡೀಸ್ನ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಹಾನೆ 10ನೇ ಸ್ಥಾನವನ್ನು ತಲುಪಿದ್ದಾರೆ. ಐಪಿಎಲ್ನಲ್ಲಿ ಗೇಲ್ 31 ಅರ್ಧಶತಕ ಸಿಡಿಸಿದ್ದು, ರಹಾನೆ ಕೂಡ ಇಷ್ಟೇ ಫಿಫ್ಟಿ ಬಾರಿಸಿ ಸಮಗೊಳಿಸಿದ್ದಾರೆ. ಶ್ರೀಮಂತ ಲೀಗ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 62 ಅರ್ಧಶತಕ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದು, 56 ಅರ್ಧಶತಕ ಚಚ್ಚಿದ್ದಾರೆ.