Latest Kannada Nation & World
ಸ್ಕೈ ಫೋರ್ಸ್ ಸಿನಿಮಾ ವಿಮರ್ಶೆ; ಅಕ್ಷಯ್ ಕುಮಾರ್ ಅಭಿನಯ ಮೆಚ್ಚಿಕೊಂಡ ಪ್ರೇಕ್ಷಕರು, ಸಿನಿಮಾದ ಕಥೆಯೂ ಸೂಪರ್

ವಿಶ್ಲೇಷಕ ತರಣ್ ಆದರ್ಶ್ ಚಿತ್ರಕ್ಕೆ 4 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಈ ಸಿನಿಮಾ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು. ನಿಜ ಜೀವನದ ಕಥೆ ಹಾಗೂ ಭಾವನೆಗಳ ಸಂಯೋಜನೆ ಉತ್ತಮವಾಗಿದೆ. ದೇಶಭಕ್ತಿ ಮತ್ತು ವೈಮಾನಿಕ ದೃಶ್ಯಗಳಿರುವ ಸನ್ನಿವೇಶವನ್ನು ನೋಡುತ್ತಿದ್ದರೆ ರೋಮಾಂಚನವಾಗುತ್ತದೆ ಎಂದಿದ್ದಾರೆ. ಅಕ್ಷಯ್ ಕುಮಾರ್ ಅವರ ಅಭಿನಯ, ವೀರ್ ಪಹಾರಿಯಾ ಪಾತ್ರ, ಕಡಿಮೆ ಸಮಯ ತೆರೆಮೇಲಿದ್ದರೂ ಸಾರಾ ಅಲಿ ಖಾನ್ ಅಭಿನಯ ಬೀರುವ ಪ್ರಭಾವ ಮತ್ತು ಸಿನಿಮಾ ನಿರೂಪಣೆಯ ಶೈಲಿ ಇದೆಲ್ಲವೂ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಅಷ್ಟು ಬೇಗ ಹಿಟ್ ಆಗದೇ ಇರಬಹುದು ಆದರೆ ಸಿನಿಮಾ ಉತ್ತಮವಾಗಿದೆ ಎಂದಿದ್ದಾರೆ.