Latest Kannada Nation & World
ಸ್ಥಾನ ಅದಲು ಬದಲು, ಶ್ರೇಷ್ಠಾ ಇನ್ಮುಂದೆ ಸೂರ್ಯವಂಶಿ ಮನೆ ಸೊಸೆ, ಭಾಗ್ಯಾ ಆ ಮನೆಯ ಅತಿಥಿ; ಭಾಗ್ಯಲಕ್ಷ್ಮೀ ಧಾರಾವಾಹಿ

ನನ್ನನ್ನು ಅತ್ತೆ ಎಂದು ಕರೆಯುವಂತೆ ಶ್ರೇಷ್ಠಾಗೆ ಹೇಳಿದ ಕುಸುಮಾ
ಕುಸುಮಾ ಹಾಗೂ ಭಾಗ್ಯಾಳಲ್ಲಿ ಆಗಿರುವ ಬದಲಾವಣೆ ಕಂಡು ತಾಂಡವ್ ಹಾಗೂ ಶ್ರೇಷ್ಠಾಗೆ ಆಶ್ಚರ್ಯವಾಗುತ್ತದೆ, ಆದರೆ ಉಳಿದವರು ಬೇಸರಗೊಳ್ಳುತ್ತಾರೆ. ನೀವಿಬ್ಬರೂ ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸುತ್ತಾರೆ. ನಾನು ಇಷ್ಟು ದಿನ ಸೊಸೆ ಅಂತ ಅವಳ ಪರವಾಗಿದ್ದೆ, ಈಗ ನನಗೆ ಎಲ್ಲವೂ ಅರ್ಥವಾಗುತ್ತಿದೆ. ನನಗೆ ಮೊದಲು ನನ್ನ ಮಗ, ನಂತರ ಸೊಸೆ, ಶ್ರೇಷ್ಠಾ ಹಾಗೂ ತಾಂಡವ್ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ಅವನ ಆಯ್ಕೆಯೇ ನನ್ನ ಆಯ್ಕೆ, ಅವನ ಸಂತೋಷವೇ ನನ್ನ ಸಂತೋಷ ಎನ್ನುತ್ತಾಳೆ. ಥ್ಯಾಂಕ್ಸ್ ಆಂಟಿ, ನೀವು ಈ ರೀತಿ ನಮ್ಮನ್ನು ವೆಲ್‌ಕಮ್ ಮಾಡುತೀರಿ ಎಂದು ನಾನು ಊಹಿಸಿರಲಿಲ್ಲ ನನಗೆ ಬಹಳ ಖುಷಿಯಾಗುತ್ತಿದೆ ಎಂದು ಶ್ರೇಷ್ಠಾ ಖುಷಿಯಾಗುತ್ತಾಳೆ. ಏನು ನನ್ನನ್ನು ಆಂಟಿ ಎಂದು ಕರೆಯುತ್ತಿದ್ದೀಯ, ಇನ್ಮುಂದೆ ಅತ್ತೆ ಅಂತ ಕರೆಯಬೇಕು ಎಂದು ಕುಸುಮಾ ಹೇಳುತ್ತಾಳೆ.