Latest Kannada Nation & World
ಸ್ಯಾಂಡಲ್‌ವುಡ್‌ನಲ್ಲಿ ಎಲೆ ಮರೆ ಕಾಯಿಯಂತಿರುವ ಯುವ ಸಂಗೀತಗಾರ ಚೇತನ್ ರಾವ್; ಇವರ ಸಾಧನೆ ಒಂದಲ್ಲಾ ಎರಡಲ್ಲ

ಯಾವುದೇ ಸಿನಿಮಾ ಗೆಲ್ಲಬೇಕಾದರೆ, ನಟ-ನಟಿಯರು ಮಾತ್ರವಷ್ಟೇ ಅಲ್ಲದೆ, ತೆರೆ ಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಮುಖ್ಯ. ಬೆಳ್ಳಿ ಪರದೆ ಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗೆ ಇಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಅದಕ್ಕೆ ಒಂದೊಳ್ಳೆ ಸಂಗೀತ ನಿರ್ದೇಶಕರು ಬೇಕು. ಕನ್ನಡದಲ್ಲಿ ಇಂತ ಸಾಕಷ್ಟು ಮ್ಯೂಸಿಕ್ ಡೈರೆಕ್ಟರ್‌ಗಳು ಇದ್ದಾರೆ. ಇದೀಗ ಮತೊಬ್ಬ ಯುವ ಸಂಗೀತ ನಿರ್ದೇಶಕ, ಚೇತನ್ ರಾವ್ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.