Latest Kannada Nation & World
ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಬೆಲೆ ಕುಸಿತವಾದರೂ ಮಾಂಸ ಕೊಳ್ಳಲು ಜನರ ಹಿಂದೇಟು

ಹೈದರಾಬಾದ್: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರದ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಹಲವೆಡೆ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಖಮ್ಮಂ, ಕರೀಂನಗರ, ನಿಜಾಮಾಬಾದ್, ಕಾಮರೆಡ್ಡಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಭೀತಿಯಿಂದ ಕೋಳಿ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರೋಗ್ಯದ ಕಾಳಜಿಯಿಂದಾಗಿ ಜನರು ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕಿದ್ದಾರೆ. ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಕೂಡಾ ದಿಡೀರ್ ಕುಸಿತವಾಗಿದೆ. ಜನರು ಮೀನು ಸೇರಿದಂತೆ ಇತರ ಬದಲಿ ಮಾಂಸಗಳ ಖರೀಸುತ್ತಿದ್ದು, ಕೋಳಿ ಮಾಂಸ ಮಾರಾಟಗಾರರಿಗೆ ಭಾರಿ ನಷ್ಟ ಉಂಟಾಗಿದೆ.