Latest Kannada Nation & World
ಹನುಮಂತನ ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಕಿಚ್ಚ; ಮನೆಗೆ ಬಂತು ಯಾರೂ ಊಹಿಸದ ಕಲರ್ ಕಲರ್ ಉಡುಗೊರೆ

Bigg Boss Kannada 11: ಬಿಗ್ ಬಾಸ್ ಮನೆಯಿಂದ ರಂಜಿತ್ ಮತ್ತು ಲಾಯರ್ ಜಗದೀಶ್ ಹೊರನಡೆಯುತ್ತಿದ್ದಂತೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆಯಂಗಳ ಪ್ರವೇಶಿಸಿದವರು, ಗಾಯಕ ಹನಮಂತ ಲಮಾಣಿ. ತಮ್ಮ ಮುಗ್ಧತೆ ಮತ್ತು ಹಾಡುಗಾರಿಕೆ ಮೂಲಕವೇ ಇಡೀ ಮನೆ ಮಂದಿಯ ಗಮನ ಸೆಳೆಯುವುದರ ಜತೆಗೆ ನಾಡಿನ ಬಿಗ್ ಬಾಸ್ ವೀಕ್ಷಕರ ಮನಸ್ಸನ್ನೂ ಗೆದ್ದಿದ್ದಾರೆ ಈ ಸ್ಪರ್ಧಿ. ಯಾವ ಇನ್ಫ್ಲುಯೆನ್ಸ್ ಇಲ್ಲದೆ, ಬಿಗ್ ಮನೆಯಲ್ಲಿ ಯಾರ ವಿರುದ್ಧ ಕತ್ತಿ ಮಸಿಯದೇ, ತಾವಾಯ್ತು, ತಮ್ಮ ಆಟವಾಯ್ತು ಎಂದಷ್ಟೇ ಆಡಿ, ಘಟಾನುಘಟಿಗಳಿಗೆ ಟಕ್ಕರ್ ಕೊಡುತ್ತಿದ್ದಾರೆ ಹನಮಂತು. ಈಗ ಇದೇ ಹನಮಂತುಗೆ ಕಿಚ್ಚನಿಂದ ವಿಶೇಷ ಉಡುಗೊರೆಗಳು ಬಂದಿವೆ.