Latest Kannada Nation & World
ಹರಾಜಿನಲ್ಲೂ ಫಿಕ್ಸಿಂಗ್, ಅಂಪೈರ್ಸ್ ನೇಮಕದಲ್ಲೂ ಫಿಕ್ಸಿಂಗ್; ಸಿಎಸ್ಕೆ ಮಾಲೀಕ ಎನ್ ಶ್ರೀನಿವಾಸ್ ವಿರುದ್ಧ ಲಲಿತ್ ಮೋದಿ ಗಂಭೀರ ಆರೋಪ

ಅವರಿಗೆ (ಎನ್ ಶ್ರೀನಿವಾಸನ್) ಐಪಿಎಲ್ ಅಂದರೆ ಇಷ್ಟವಾಗುತ್ತಿರಲಿಲ್ಲ. ವಿಶ್ವದ ಶ್ರೀಮಂತ ಲೀಗ್ ಯಶಸ್ವಿಯಾಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಮುಂದುವರೆದಂತೆ ಯಶಸ್ಸು ಸಿಕ್ಕಿತು. ಬಳಿಕ ಲಾಭ ಮಾಡಲು ಪ್ರಾರಂಭಿಸಿದರು. ಬಿಸಿಸಿಐ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದ ಅವರು, ನನ್ನ ದೊಡ್ಡ ಎದುರಾಳಿಯಾಗಿದ್ದರು. ಫಿಕ್ಸಿಂಗ್ ಸೇರಿ ಅನೇಕ ಅಕ್ರಮಗಳನ್ನು ಎಸಗಿದ್ದಾರೆ. ಅಂಪೈರ್ ನೇಮಕಕ್ಕೆ ಸಂಬಂಧಿಸಿದ ಮರ್ಮ ನನ್ನ ಅರಿವಿಗೆ ಬಂದಿರಲಿಲ್ಲ. ಬಳಿಕ ಎಲ್ಲವೂ ಗೊತ್ತಾಯಿತು. ಅದನ್ನು ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ ಎಂದು ಅವರ ಅಕ್ರಮಗಳ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಹೀಗಾಗಿ ನನ್ನ ವಿರೋಧಿಯಾಗಿದ್ದರು ಎಂದಿದ್ದಾರೆ.