Latest Kannada Nation & World
ಹರ್ಲೀನ್ ಡಿಯೋಲ್ ಶತಕ, ಮೂವರು ಅರ್ಧಶತಕ; ವೆಸ್ಟ್ ಇಂಡೀಸ್ ವಿರುದ್ಧ ಭಾರತ ವನಿತೆಯರಿಗೆ 115 ರನ್ಗಳ ಜಯ, ಸರಣಿ ವಶ
ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತದ ವನಿತೆಯರು ಜಯಭೇರಿ ಬಾರಿಸಿದ್ದಾರೆ. ಮೊದಲ ಪಂದ್ಯವನ್ನು 211 ರನ್ಗಳ ಅಂತರದಿಂದ ಗೆದ್ದಿದ್ದ ಹರ್ಮನ್ ಪಡೆ, ದ್ವಿತೀಯ ಏಕದಿನ ಪಂದ್ಯದಲ್ಲಿ 115ರನ್ಗಳ ಅಂತರದಿಂದ ಗೆದ್ದು ಒಂದು ಪಂದ್ಯ ಬಾಕಿ ಇರುವಂತೆ ವಶಪಡಿಸಿಕೊಂಡಿದೆ. ಹರ್ಲೀನ್ ಡಿಯೋಲ್ (115) ಆಕರ್ಷಕ ಶತಕ, ಸ್ಮೃತಿ ಮಂಧಾನ (53), ಪ್ರತಿಕಾ ರಾವಲ್ (73) ಮತ್ತು ಜೆಮಿಮಾ ರೋಡ್ರಿಗಸ್ (52) ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಭಾರತ ತವರಿನಲ್ಲಿ ಸರಣಿ ಜಯದ ನಗೆ ಬೀರಿದೆ. ಉಳಿದ ಪಂದ್ಯವನ್ನೂ ಜಯಿಸಿ ಸರಣಿ ಕ್ವೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.