Latest Kannada Nation & World
ಹಳೇ ಮೈಸೂರು ಭಾಗದ ವರ್ತಕರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಕಥೆಯೇ ದಿ ರೈಸ್ ಆಫ್ ಅಶೋಕ
ಮನು ಶೇಡ್ಗಾರ್ ನಿರ್ದೇಶನ
ಮನು ಮೂಲತಃ ಸಂಕಲನಕಾರರು. ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್, ‘ಅಶೋಕ ಬ್ಲೇಡ್’ ಚಿತ್ರಕ್ಕೂ ಸಂಕಲನ ಮಾಡಿದವರು. ಅವರಿಗೆ ಚಿತ್ರದ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವುದರಿಂದ, ಅವರಿಂದ ಚಿತ್ರವನ್ನು ಮುಗಿಸಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆಯಂತೆ. ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದ್ದು, ಒಂದಿಷ್ಟು ಮಾತಿನ ಭಾಗದ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇತ್ತಂತೆ. ಇದೀಗ ಈ ಚಿತ್ರವನ್ನು ಮನು ಶೇಡ್ಗಾರ್ ಮುಂದುವರೆಸುತ್ತಿದ್ದಾರೆ.