Latest Kannada Nation & World
ಮಾರ್ನಸ್ ಲಬುಶೇನ್ ಹಿಡಿದು ರನ್ ಓಡದಂತೆ ತಡೆದ ರವೀಂದ್ರ ಜಡೇಜಾ, ಕೋಪಗೊಂಡ ಸ್ಮಿತ್; ಜಡ್ಡುಗೆ ಬೀಳುತ್ತಾ ದಂಡ? ವಿಡಿಯೋ

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ನಾನ್ ಸ್ಟ್ರೈಕ್ನಲ್ಲಿದ್ದ ಮಾರ್ನಸ್ ಲಬುಶೇನ್ ಅವರನ್ನು ರನ್ ಓಡದಂತೆ ತಡೆದಿದ್ದು, ಸ್ಟ್ರೈಕ್ನಲ್ಲಿದ್ದ ಸ್ಟೀವ್ ಸ್ಮಿತ್ ಕೋಪಕ್ಕೆ ಕಾರಣವಾಗಿದೆ. ಬ್ಯಾಟರ್ಗೆ ರನ್ ಓಡಲು ಅಡ್ಡಿಪಡಿಸಿದ ಹಿನ್ನೆಲೆ ಜಡೇಜಾ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.