Astrology
ಹಸು ಅಶುಭವಲ್ಲ; ಮುಕ್ಕೋಟಿ ದೇವತೆಗಳೇ ನೆಲೆಯಾಗಿರುವ ಹಸು ಕನಸಲ್ಲಿ ಬಂದರೆ ಇಷ್ಟೆಲ್ಲಾ ಶುಭಾಫಲಗಳು ದೊರೆಯುತ್ತಂತೆ

ಹಸುವು ಕನಸಿನಲ್ಲಿ ನಿಮ್ಮನ್ನು ನೋಡುತ್ತಾ ಜೋರಾಗಿ ಕೂಗಿದಲ್ಲಿ, ನಿಮ್ಮೊಡನೆ ಬೇರೆಯವರು ಜಗಳವಾಡುತ್ತಾರೆ. ನಿಮ್ಮ ಬಳಿ ಇರುವ ಹಸುವು ನಿಮ್ಮಿಂದ ದೂರ ಹೋದಲ್ಲಿ, ನಿಮ್ಮ ವಿರೋಧಿಯೊಬ್ಬರು ಸೋಲಿನ ಭಯದಿಂದ ದೂರ ಉಳಿಯುತ್ತಾರೆ. ಕಂದು ಬಣ್ಣದ ಹಸುವು ಕನಸಿನಲ್ಲಿ ಕಂಡು ತೊಂದರೆ ನೀಡಲು ಪ್ರಯತ್ನಿಸಿದಲ್ಲಿ, ಜೀವನದಲ್ಲಿ ಅನಿರೀಕ್ಷತವಾದ ತೊಂದರೆ ಅಥವ ಸಮಸ್ಯೆಯೊಂದು ಎದುರಾಗುವುದೆಂದು ಸೂಚಿಸುತ್ತದೆ. ಮಹಿಳೆಯೊರೊಬ್ಬರು ಅದರಿಂದ ಪಾರಾಗಲು ಸಹಕರಿಸುತ್ತಾರೆ. ಜನ್ಮ ಕುಂಡಲಿಯಲ್ಲಿ ರಾಹು ಅಥವ ಶುಕ್ರನ ಶಕ್ತಿಯನ್ನು ಇದು ಸೂಚಿಸುತ್ತದೆ. ಕೊಂಬಿಲ್ಲದ ಹಸುವು ಕಂಡಲ್ಲಿ ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಉಂಟಾಗುವುದರ ಸೂಚನೆಯಿದೆ. ಕನಸಿನಲ್ಲಿ ಬಿಳಿ ಬಣ್ಣದ ಹಸು ಕಂಡು ಬರುವುದು ಶುಭಸೂಚನೆಯಾಗಿದೆ.