Latest Kannada Nation & World
ಹಾರ್ದಿಕ್, ತಿಲಕ್ ಅಬ್ಬರಕ್ಕೂ ಜಗ್ಗದ ಆರ್‌ಸಿಬಿಗೆ ರೋಚಕ ಗೆಲುವು; 2015ರ ನಂತರ ವಾಂಖೆಡೆಯಲ್ಲಿ ಮುಂಬೈ ಮಣಿಸಿದ ಬೆಂಗಳೂರು

ಇತ್ತೀಚೆಗಷ್ಟೇ ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದು 17 ವರ್ಷಗಳ ಸೋಲಿನ ಕವಚ ತೆರೆದಿದ್ದ ಆರ್‌ಸಿಬಿ, ಇದೀಗ ಮುಂಬೈನಲ್ಲಿ 9 ವರ್ಷಗಳ ಗೆಲುವಿನ ಬರ ನೀಗಿಸಿದೆ. ಪಂದ್ಯದುದ್ದಕ್ಕೂ ವಾಂಖೆಡೆಯಲ್ಲಿ ಆರ್‌ಸಿಬಿ ಅಭಿಮಾನಿಗಳದ್ದೇ ಘೋಷವಾಕ್ಯಗಳ ನಡುವೆ, ಆರ್‌ಸಿಬಿಯು ಎಂಐ ತಂಡದ ಗರ್ವ ಮುರಿದಿದೆ.