Latest Kannada Nation & World
ಹಾಲಿವುಡ್‌ನ ಖ್ಯಾತ ನಟ ಬ್ರಾಡ್ ಪಿಟ್ ಜತೆ ನಟಿಸುವ ಮಹಾನ್ ಅವಕಾಶ ಬೇಡವೆಂದ ಐಶ್ವರ್ಯಾ ರೈ ಬಚ್ಚನ್

ಟ್ರಾಯ್ ಸಿನಿಮಾದಲ್ಲಿ ನಟಿಸಬೇಕಿದ್ದರೆ ಐಶ್ವರ್ಯಾ ರೈ ಅವರು ತನ್ನ ಕ್ಯಾಲೆಂಡರ್‌ನ 6-9 ತಿಂಗಳನ್ನು ಆ ಸಿನಿಮಾಕ್ಕೆ ಬ್ಲಾಕ್ ಮಾಡಬೇಕಿತ್ತು. ಆದರೆ, ಈಕೆಗೆ ಅಷ್ಟು ತಿಂಗಳು ನಟಿಸುವಂತಹ ಪಾತ್ರ ಇರಲಿಲ್ಲ. ಇವರ ಕ್ಯಾರೆಕ್ಟರ್‌ಗೆ ಅಷ್ಟು ದಿನವೂ ಶೂಟಿಂಗ್ ಇಲ್ಲದೆ ಇದ್ದರೂ ಪ್ರಾಜೆಕ್ಟ್‌ನ ಅವಶ್ಯಕತೆಗಾಗಿ ಅಷ್ಟು ತಿಂಗಳು ಇವರು ಈ ಸಿನಿಮಾಕ್ಕೆ ಸಮಯ ಮೀಸಲಿರಿಸಬೇಕೆಂದು ಚಿತ್ರತಂಡ ಬಯಸಿತ್ತು. “ನನಗೆ ಹಾಲಿವುಡ್ ಈ ರೀತಿ ಕಾರ್ಯನಿರ್ವಹಿಸುತ್ತದೆ ಎಂಬ ಐಡಿಯಾ ಇರಲಿಲ್ಲ. ಆ ಪ್ರಾಜೆಕ್ಟ್‌ಗೆ ಅಷ್ಟು ಸಮಯ ನೀಡಲು ಸಾಧ್ಯವಿರಲಿಲ್ಲ. ಅದು ದೊಡ್ಡ ಸಿನಿಮಾವಾಗಿತ್ತು. ಆದರೆ, ನನ್ನ ಪಾತ್ರಕ್ಕೆ ಅಷ್ಟು ಶೂಟಿಂಗ್‌ನ ಅವಶ್ಯಕತೆ ಇರದೆ ಇದ್ದರೂ ನಾನು ಅಷ್ಟು ಸಮಯ ನೀಡಬೇಕಿತ್ತು” ಎಂದು ಐಶ್ವರ್ಯಾ ರೈ ಹೇಳಿದ್ದಾರೆ.