Latest Kannada Nation & World
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ, ಮತ ಎಣಿಕೆಗೆ ಸಿದ್ದತೆ, ಮಾಹಿತಿ ಎಲ್ಲಿ ಸಿಗಲಿದೆ

ದೆಹಲಿಯ 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆದಿದೆ. ಶೇ. 60.44 ರಷ್ಟು ಮತದಾನವೂ ಆಗಿದೆ. ಇದರಲ್ಲಿ ನವದೆಹಲಿ ಭಾಗದಲ್ಲಿ ಶೇ. 56.41, ಜಂಗ್ಪುರ ಪ್ರದೇಶದಲ್ಲಿ ಶೇ. 57.42, ಕಲ್ಕಾಜಿ ಭಾಗದಲ್ಲಿ ಶೇ 54.59ರಷ್ಟು ಮತದಾನವಾಗಿದೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಒಟ್ಟು 1.56 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾದರೂ ಒಂದು ಕೋಟಿ ಯಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿ 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶನಿವಾರ ಅವರ ಮತ ಭವಿಷ್ಯ ಹೊರಬೀಳಲಿದೆ. ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.