Latest Kannada Nation & World
ಹೆಂಡತಿ ಕಪ್ಪು, ಗಂಡ ಬಿಳಿ ಎಂದು ವರ್ಣಬೇಧ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಕೇರಳದ ಮಹಿಳಾ ಐಎಎಸ್ ಅಧಿಕಾರಿ

Sarada Muraleedharan: ಕೇರಳದ ಮುಖ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಶಾರದಾ ಮುರಳೀಧರನ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವರ್ಣಭೇದ ಹಾಗೂ ಲಿಂಗ ತಾರತಮ್ಯ ಮಾಡುವವರನ್ನು ಕಟುವಾಗಿ ಟೀಕಿಸಿದ್ದಾರೆ ಬರೆದುಕೊಂಡಿದ್ದಾರೆ. ಕಪ್ಪು ಬಣ್ಣವನ್ನು ನಿಂದನೆ ಮಾಡುವವರಿಗೆ ಕಡಕ್ ಕೊಟ್ಟಿರುವ ಅವರು, ಕಪ್ಪು ಎನ್ನುವ ಕಾರಣಕ್ಕೆ ಬಾಲ್ಯದಿಂದಲೂ ತನ್ನೊಳಗೆ ಎಷ್ಟು ಕೀಳರಿಮೆ ಇತ್ತು, ತಾನು ಏನೆಲ್ಲಾ ಅನುಭವಿಸಬೇಕಾಯ್ತು ಎಂಬುದನ್ನೂ ಬರೆದುಕೊಂಡಿದ್ದಾರೆ. ಮಾತ್ರವಲ್ಲ ಈಗ ಇಷ್ಟು ದೊಡ್ಡ ಹುದ್ದೆಗೆ ಬಂದರೂ ಇಲ್ಲೂ ಕೂಡ ಬಣ್ಣದ ಆಧಾರದ ಮೇಲೆ ಜನ ತನ್ನನ್ನು ಕೀಳಾಗಿ ನೋಡುವುದು ನಿಲ್ಲಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.