Astrology
ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಸಮಸ್ಯೆ, ಕನ್ಯಾ ರಾಶಿಯವರ ಲವ್ ಲೈಫ್ ಸಕ್ಸಸ್ ಆಗಿ ಮದುವೆಯಾಗಲಿದೆ

ಶನಿ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ, ಮೀನ ರಾಶಿಯವರಿಗೆ 2ನೇ ಹಂತ ಹಾಗೂ ಕುಂಭ ರಾಶಿಯವರಿಗೆ ಕೊನೆಯ ಹಂತದ ಪರಿಣಾಮಗಳನ್ನು ಬೀರಲಿದೆ. ಶನಿಯ ಧೈಯಾ ವೃಶ್ಚಿಕ ರಾಶಿಯವರಿಗೆ ಕೊನೆಗೊಂಡು ಧನಸ್ಸು ರಾಶಿಯಲ್ಲಿ ಶುರುವಾಗುತ್ತದೆ. ಆದರೆ ಇದು ಹೆಚ್ಚಿನ ಪರಿಣಾಮಗಳನ್ನು ಬೀರುವುದಿಲ್ಲ. ಶನಿಯು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತಾನೆ, ಅದನ್ನು ತಪ್ಪಿದಲ್ಲಿ ಎಚ್ಚರಿಸುತ್ತಾನೆ. ಶಿಕ್ಷೆಯನ್ನೂ ನೀಡುತ್ತಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷಿಸುತ್ತಾನೆ. 2025 ರಲ್ಲಿ ಶನಿಯ ಸಂಚಾರವು ನಿಮ್ಮ ವೃತ್ತಿ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಿಥುನ, ಕರ್ಕಾಟಕ ರಾಶಿಯವರ ಶನಿ ಸಂಕ್ರಮಣ ಫಲಿತಾಂಶ ಹೀಗಿದೆ.