Latest Kannada Nation & World
ಹೊಸ ವರ್ಷದ ಮೊದಲ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಫುಲ್ ಲಿಸ್ಟ್

New Year OTT Movies: ಚಿತ್ರಮಂದಿರಗಳಲ್ಲಿ ಸ್ಟಾರ್ ಸಿನಿಮಾಗಳ ಹಬ್ಬ ನಡೆಯುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ UI ಸಿನಿಮಾ ಇಂದಿಗೂ ತನ್ನ ಓಟವನ್ನು ಮುಂದುವರಿಸಿದರೆ, ಇತ್ತ ಅದಾದ ಮೇಲೆ ತೆರೆಗೆ ಬಂದ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಕಲೆಕ್ಷನ್‌ನಲ್ಲಿ ಕಿಂಗ್ ಎನಿಸಿಕೊಳ್ಳುತ್ತಿದೆ. ಈ ಸಿನಿಮಾಗಳ ನಡುವೆ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳೂ ಬಿಡುಗಡೆ ಆಗಿ ಸದ್ದು ಮಾಡುತ್ತಿವೆ. ಇದು ಚಿತ್ರಮಂದಿರದ ಕಥೆಯಾದರೆ, ಹೊಸ ವರ್ಷದ ಸಂದರ್ಭದಲ್ಲಿ ಒಟಿಟಿಯಲ್ಲಿಯೂ ಒಂದಷ್ಟು ಹೊಸ ಹೊಸ ಕಂಟೆಂಟ್‌ಗಳು ಆಗಮಿಸುತ್ತಿವೆ. ಆ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಯಾವವು? ಹೀಗಿದೆ ಮಾಹಿತಿ.