Latest Kannada Nation & World
ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟ್ ಆಯ್ತು; ತಲೆಮೇಲೆ ಕೈಹೊತ್ತ ಹೂಡಿಕೆದಾರರು, ಮಾರಿದ್ರೆ ನಷ್ಟ, ಇಟ್ಕೊಂಡ್ರೆ…!

Hyundai Motor India shares listing Price: ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಲಿಸ್ಟಿಂಗ್ ದಿನದಂದು ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಐಪಿಒ ಪ್ರಿಯರು ನಿರಾಶೆಗೊಂಡಿದ್ದಾರೆ. ಹ್ಯುಂಡೈ ಇಂಡಿಯಾದ ಐಪಿಒಗೆ ಅರ್ಜಿ ಸಲ್ಲಿಸಿ, ವಿತರಣೆ ಪಡೆದವರು ಆತಂಕದಿಂದಲೇ ಇಂದು ಹತ್ತು ಗಂಟೆಗೆ ತಮ್ಮ ಪೋರ್ಟ್‌ಪೊಲಿಯೋ ನೋಡುತ್ತಿದ್ದರು. ಜಿಎಂಪಿ ಮುನ್ಸೂಚನೆ ಪ್ರಕಾರ ಪ್ರತಿಷೇರಿಗೆ ಸುಮಾರು ಶೇಕಡ 3ರಷ್ಟು ದರ ಹೆಚ್ಚುವ ಸೂಚನೆ ಇತ್ತು. ಆದರೆ, ಐಪಿಒಗೆ ನೀಡಿರುವ ಹಣಕ್ಕಿಂತ ಶೇಕಡ 1.32 ಕಡಿಮೆ ದರದಲ್ಲಿ ಹ್ಯುಂಡೈ ಮೋಟಾರ್ ಐಪಿಒ ಲಿಸ್ಟ್ ಆಗಿದೆ. ಪ್ರತಿಷೇರಿಗೆ ಐಪಿಒ ದರ 1960 ರೂಪಾಯಿ ಇತ್ತು. ಆದರೆ, 1,934 ರೂಗೆ ಲಿಸ್ಟ್ ಆಗಿತ್ತು. ಈಗ 11 ಗಂಟೆಯ ಆಸುಪಾಸಿನಲ್ಲೂ ಶೇಕಡ 2ರ ಆಸುಪಾಸಿನಲ್ಲಿ ಇಳಿಕೆ ಹಾದಿಯಲ್ಲಿಯೇ ಇದೆ.