Latest Kannada Nation & World
10 ಸಾವಿರ ಸಬ್‌ಸ್ಕ್ರೈಬರ್ಸ್ ಇರೋ ಚಾನೆಲ್‌ಗಳಿಗೆ ಹಣ ಗಳಿಸಲು ಇನ್ನೊಂದು ಫೀಚರ್ ನೀಡಿದ ಯೂಟ್ಯೂಬ್

ಯೂಟ್ಯೂಬ್ ಇದೀಗ ಭಾರತದ ಕ್ರಿಯೆಟರ್‌ಗಳಿಗೆ ಹಣ ಗಳಿಕೆ ಹೆಚ್ಚಿಸಿಕೊಳ್ಳಲು ಹೊಸ ಆಯ್ಕೆಯನ್ನು ನೀಡಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಮಾನಿಟೈಜ್ ಮಾಡಿಕೊಳ್ಳಲು ಹಲವು ವಿಧಾನಗಳು ಇವೆ. ಇವುಗಳಲ್ಲಿ ಪ್ರಮುಖ ವಿಧಾನ ಜಾಹೀರಾತು ಆದಯ. ಇದರೊಂದಿಗ ಯೂಟ್ಯೂಬ್ ಪ್ರೀಮಿಯಂ, ಬ್ರ್ಯಾಂಡ್ ಕನೆಕ್ಟ್ ಮತ್ತು ಚಾನೆಲ್ ಮೆಂಬರ್‌ಶಿಪ್, ಸೂಪರ್ ಥ್ಯಾಂಕ್ಸ್, ಸೂಪರ್ ಚಾಟ್, ಸೂಪರ್ ಸ್ಟ್ರಿಕರ್ಸ್ ಇತ್ಯಾದಿಗಳಿಂದಲೂ ಆದಾಯ ಗಳಿಸಲು ಸಾಧ್ಯವಿದೆ. ಇದೀಗ ಈ ಪಟ್ಟಿಗೆ ಹೊಸದೊಂದು ಆಯ್ಕೆಯಾಗಿದೆ. ಆದರೆ, ಯೂಟ್ಯೂಬ್ ಶಾಪಿಂಗ್ ಫೀಚರ್ ನಿಮ್ಮದಾಗಿಸಿಕೊಳ್ಳಲು ಕನಿಷ್ಠ 10 ಸಾವಿರ ಫಾಲೋವರ್ಸ್‌ಗಳನ್ನು ನೀವು ಹೊಂದಿರಬೇಕು. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ಫೀಚರ್ ಪರಿಚಯಿಸಲಾಿದೆ. ಅಮೆರಿಕ, ದಕ್ಷಿಣ ಕೊರಿಯಾ,ವಿಯೆಟ್ನಾಂ, ಇಂಡೋನೇಷ್ಯಾ, ಥೈಲಾಂಡ್‌ಗಳಲ್ಲಿಯೂ ಈ ಫೀಚರ್ ಇದೆ. ಕನ್ನಡ ಯೂಟ್ಯೂಬರ್‌ಗಳೂ ಈ ಫೀಚರ್‌ನ ಸದುಪಯೋಗ ಮಾಡಿಕೊಳ್ಳಬಹುದು.