Latest Kannada Nation & World
150 ಕೋಟಿ ಬಜೆಟ್, ಕೇವಲ 20 ಕೋಟಿ ಗಳಿಕೆ! ಒಟಿಟಿಗೆ ಬರಲಿದೆ ಹೀನಾಯ ಸೋಲುಂಡ ಮೋಹನ್‌ಲಾಲ್ ಸಿನಿಮಾ

ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ಸುಮಾರು 150 ಕೋಟಿ ರೂ.ಗಳ ಬೃಹತ್ ಬಜೆಟ್‌ನೊಂದಿಗೆ, ಅಷ್ಟೇ ನಿರೀಕ್ಷೆಗಳ ನಡುವೆ ಈ ಚಿತ್ರ ಡಿ. 25ರಂದು ಬಿಡುಗಡೆಯಾಯಿತು. ಆದರೆ ಸಿನಿಮಾ ಮಾತ್ರ ಗೆಲುವು ಕಾಣಲಿಲ್ಲ. ಹಾಕಿದ ಬಜೆಟ್ ವತ್ತಟ್ಟಿಗಿರಲಿ, ಅದರ ಅರ್ಧದಷ್ಟೂ ಹಣ ವಾಪಾಸ್ ಬರಲಿಲಿಲ್ಲ. ಸೋತು ಸುಣ್ಣವಾಯ್ತು. ಗಳಿಸಿದ್ದು ಕೇವಲ 20 ಕೋಟಿ ಮಾತ್ರ!