Latest Kannada Nation & World
17 ನಿಮಿಷದಲ್ಲಿ 25 ಕೋಟಿ ಚಿನ್ನಾಭರಣ ದೋಚಿದ್ದು ಹೇಗೆ, ದರೋಡೆಕೋರರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲು-ವಿಡಿಯೋ

5) ತನಿಷ್ಕ್ ಶೋರೂಂ ದರೋಡೆ: ರಾತ್ರಿ ಎನ್ಕೌಂಟರ್, ಬಂಧನ
ತನಿಷ್ಕ್ ಶೋರೂಂ ದರೋಡೆ ಪ್ರಕರಣ ರಾಜಕೀಯವಾಗಿ ಕೂಡ ಸಂಚಲನ ಮೂಡಿಸಿದ್ದು, ಬಿಹಾರ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾದವು. ಇದರ ಬೆನ್ನಿಗೆ ಪೊಲೀಸರ ಮೇಲೆ ಒತ್ತಡ ಹೆಚ್ಚಾದ ಕಾರಣ ಕೂಡಲೇ ಕಾರ್ಯಪ್ರವೃತ್ತರಾದ ಅವರು ನಾಕಾಬಂಧಿ ಮಾಡಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದರೋಡೆಕೋರರ ಮುಖ ಚಹರೆ ಪರಿಶೀಲಿಸಿ ಹುಡುಕಾಟ ಶುರುಮಾಡಿದರು. ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆರು ಶಂಕಿತರು ಮೂರು ಬೈಕ್ಗಳಲ್ಲಿ ಹೋಗುತ್ತಿದ್ದುದು ಕಂಡುಬಂತು. ಅವರನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಅವರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಆಗ ಪೊಲೀಸರು ಪ್ರತಿದಾಳಿ ನಡೆಸಿದ್ದು, ಇಬ್ಬರು ಶಂಕಿತರ ಕಾಲಿಗೆ ಗುಂಡೇಟು ತಗುಲಿದೆ. ಅವರನ್ನು ಬಂಧಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತರಿಂದ 10 ಎರಡು ಪಿಸ್ತೂಲ್, 10 ಬುಲೆಟ್, ದರೋಡೆ ಮಾಡಿದ್ದ ಚಿನ್ನಾಭರಣದ ಎರಡು ಬ್ಯಾಗ್ ಮತ್ತು ಒಂದು ಪಲ್ಸರ್ ಬೈಕ್ ಅನ್ನು ವಶಪಡಿಸಲಾಗಿದೆ. ಉಳಿದವರ ಬಂಧನಕ್ಕೆ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.