2024ರಲ್ಲಿ ಭಾರತದ ಟಾಪ್-10 ಘಟನೆ; ಸತತ ಮೂರನೇ ಬಾರಿಗೆ ಮೋದಿಗೆ ಅಧಿಕಾರದ ಸಿಹಿ, ವಯನಾಡು ಭಾರೀ ದುರಂತದ ಕಹಿ
ಭಾರತದ ಹಲವು ಖುಷಿಯ ಸಂಗತಿಗಳು, ಬೇಸರದ ವಿಚಾರಗಳಿಗೂ 2024ರಲ್ಲಿ ಸಾಕ್ಷಿಯಾಯಿತು. ಈ ವರ್ಷ ಒಂದು ರೀತಿಯಲ್ಲಿ ಚುನಾವಣೆ ವರ್ಷ. ಸತತ ಹತ್ತು ವರ್ಷ ಅಧಿಕಾರದಲ್ಲಿದ್ದ ಎನ್ಡಿಎ ಅನ್ನು ಕಿತ್ತೆಸೆದು ಅಧಿಕಾರಕ್ಕೆ ಬರಬೇಕೆಂದು ಪಣ ತೊಟ್ಟ ಇಂಡಿಯಾ ಬ್ಲಾಕ್ ನಿಜಕ್ಕೂ ಉತ್ತಮ ಸಾಧನೆಯನ್ನೇ ತೋರಿತು. ಬಿಜೆಪಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನ ಪಡೆದರೂ ಎನ್ಡಿಎ ಬಲದಿಂದ ಅಧಿಕಾರಕ್ಕೆ ಬಂದಿತು. ರಾಹುಲ್ಗಾಂಧಿ ಸತತ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಭಾರತದಲ್ಲಿ ಚೇತರಿಕೆ ಕಂಡಿತು. ಹರಿಯಾಣ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆದವು ಕೆಲವು ಕಡೆ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ಜಾರ್ಖಂಡ್ನಲ್ಲಿ ಜೆಎಂಎಂ ಗೆಲುವಿನ ನಗೆ ಬೀರಿತು. ಈ ಬಾರಿ ಭಾರತವನ್ನು ಮಾಡಿ ರಣ ಮಳೆ. ತಮಿಳುನಾಡಿನಲ್ಲಿ ಮಳೆಯಿಂದ ಸಾಕಷ್ಟು ಅನಾಹುತಗಳು ಆದವು. ಕೇರಳದಲ್ಲಂತೂ ವಯನಾಡು ದುರಂತ ಇತಿಹಾಸದಲ್ಲಿ ಉಳಿದು ಹೋಯಿತು. ರೈಲು ಅಪಘಾತ, ಸತ್ಸಂಗದ ವೇಳೆ ಕಾಲ್ತುಳಿತ, ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟದಂತಹ ಪ್ರಕರಣಗಳು 2024ರ ಪುಟಗಳಲ್ಲಿ ದಾಖಲಾದವು