Latest Kannada Nation & World
2024ರ ಕ್ಯಾಲೆಂಡರ್ ವರ್ಷದಲ್ಲಿ ಅವಾರ್ಡ್ ಗೆದ್ದ ಪುರುಷ, ಮಹಿಳಾ ವಿಜೇತರ ಪಟ್ಟಿ
ಆಟಗಾರರನ್ನು ಉತ್ತೇಜಿಸುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರತಿ ತಿಂಗಳು ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ‘ತಿಂಗಳ ಆಟಗಾರ‘ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಜನವರಿಯಿಂದ ಹಿಡಿದು ಡಿಸೆಂಬರ್ ತನಕ ಪ್ರತಿ ತಿಂಗಳಿಗೂ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ತಿಂಗಳಲ್ಲಿ ಯಾರು ಅದ್ಭುತ ಪ್ರದರ್ಶನ ನೀಡುತ್ತಾರೋ ಅಂತಹ ಮೂವರು ನಾಮನಿರ್ದೇಶನ ಮಾಡಲಾಗುತ್ತದೆ. ಬಳಿಕ ಅಭಿಮಾನಿಗಳ ಮತಗಳಿಂದ ವಿಜೇತರನ್ನು ಘೋಷಿಸಲಾಗುತ್ತದೆ. ಯಾವ ಆಟಗಾರ ಅತ್ಯಧಿಕ ಮತ ಪಡೆಯುತ್ತಾರೋ ಅವರೇ ವಿಜೇತರು. ಇಲ್ಲಿ ಕೇವಲ ಅಭಿಮಾನಿಗಳ ಜೊತೆಗೆ ಐಸಿಸಿ ಅಕಾಡೆಮಿಯ ಅಧಿಕಾರಿಗಳು, ಮಾಜಿ ಆಟಗಾರರು, ಪ್ರಸಾರಕರು, ವಿಶ್ವದ ಪತ್ರಕರ್ತರು ಸಹ ಮತ ಚಲಾವಣೆ ಮಾಡಲಿದ್ದಾರೆ.