Astrology
2025 ರಲ್ಲಿ ಎಷ್ಟು ಸೂರ್ಯ ಗ್ರಹಣಗಳು ಸಂಭವಿಸಲಿವೆ; ದಿನಾಂಕ, ಸಮಯ ಸೇರಿ ಪ್ರಮುಖ 5 ವಿಷಯಗಳಿವು
2025ರಲ್ಲಿ ಸೂರ್ಯಗ್ರಹಣ: 2025ರ ಹೊಸ ವರ್ಷದಲ್ಲಿ ಎರಡು ಸೂರ್ಯಗ್ರಹಣಗಳು ಸಂಭವಿಸಲಿವೆ. 2025ರ ಮಾರ್ಚ್ 29 ರಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಆ ನಂತರ ಅಂದರೆ 2025ರ ಸೆಪ್ಟೆಂಬರ್ 21 ರಂದು ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಗ್ರಹಣವು ಖಗೋಳ ವಿದ್ಯಮಾನವಾಗಿದ್ದು, ಇದರಲ್ಲಿ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ಬರುತ್ತಾನೆ. ಖಗೋಳ ವಿದ್ಯಮಾನವು ಕೇವಲ ದೃಶ್ಯ ಮಾತ್ರವಲ್ಲ, ವಿಶ್ವದ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಖಗೋಳ ಮಹತ್ವವನ್ನು ಹೊಂದಿದೆ. 2025 ರಲ್ಲಿ ಸಂಭವಿಸುವ ಎರಡೂ ಸೂರ್ಯಗ್ರಹಣಗಳು ಧಾರ್ಮಿಕ ದೃಷ್ಟಿಕೋನದಿಂದ ಹೆಚ್ಚಿನ ಮಹತ್ವವನ್ನು ಹೊಂದಿರುವ ದಿನಾಂಕಗಳಲ್ಲಿ ಸಂಭವಿಸುತ್ತಿವೆ ಎಂಬುದು ವಿಶೇಷ. ಮೊದಲನೆಯದಾಗಿ ಎರಡೂ ಗ್ರಹಣಗಳು ಭಾಗಶಃ ಗ್ರಹಣಗಳಾಗಿವೆ. 2025 ರ ಗ್ರಹಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು ಇಲ್ಲಿವೆ.