Latest Kannada Nation & World
50 ಪುರುಷರು, 10 ವರ್ಷಗಳ ಕಾಲ ಅತ್ಯಾಚಾರ; ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿದ ವ್ಯಕ್ತಿಗೆ ಕಠಿಣ ಶಿಕ್ಷೆ
Dominique Pelicot: ತನ್ನ ಮಾಜಿ ಪತ್ನಿಗೆ ಕ್ರೂರ ಹಿಂಸೆ ನೀಡಿರುವ ವ್ಯಕ್ತಿಯೊಬ್ಬನಿಗೆ ಫ್ರಾನ್ಸ್ ನ್ಯಾಯಾಲಯವು ಫ್ರೆಂಚ್ ಕಾನೂನಿಡಿ ಇರುವ ಗರಿಷ್ಠ ಶಿಕ್ಷೆಯನ್ನು ವಿಧಿಸಿ ಗುರುವಾರ ತೀರ್ಪು ನೀಡಿದೆ. ಸುಮಾರು ಒಂದು ದಶಕಗಳ ಕಾಲ ತನ್ನ ಮಾಜಿ ಪತ್ನಿಗೆ ಡ್ರಗ್ಸ್ ನೀಡಿ ಅಪರಿಚಿತರಿಂದ ಅತ್ಯಾಚಾರ ಮಾಡಿಸುತ್ತಿದ್ದ ಆರೋಪ ಈತನ ಮೇಲಿತ್ತು. ಡ್ರಗ್ಸ್‌ನಿಂದ ತನ್ನ ಮಾಜಿ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ಆನ್‌ಲೈನ್‌ನಿಂದ ನೇಮಕ ಮಾಡಿಕೊಂಡ ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸುತ್ತಿದ್ದನು. ಇಂತಹ ವಿಕೃತ, ವಿಚಿತ್ರ ಕ್ರೌರ್ಯ ಮೆರೆದ ಡೊಮಿನಿಕ್ ಪೆಲಿಕಾಟ್‌ಗೆ ಇಂದು ಫ್ರಾನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.