Latest Kannada Nation & World
6 ಟಿ20, 2 ಏಕದಿನ ವಿಶ್ವಕಪ್, 25 ಪ್ರಶಸ್ತಿ; ಕ್ರಿಕೆಟ್ನಲ್ಲಿ ಎಲ್ಲಿಸ್ ಪೆರಿ ಮುಟ್ಟಿದ್ದೆಲ್ಲಾ ಚಿನ್ನ, ಎಂಥವರಿಗೂ ಸ್ಫೂರ್ತಿ ಅವರ ಜೀವನ

ಎಲ್ಲಿಸ್ ಪೆರಿ.. ಕ್ರಿಕೆಟ್ ಮತ್ತು ಫುಟ್‌ಬಾಲ್ ವಿಶ್ವಕಪ್‌ಗಳಲ್ಲಿ ಆಸ್ಟ್ರೇಲಿಯಾ ಪರಆಡಿದ ಏಕೈಕ ಆಟಗಾರ್ತಿ. ಎರಡು ವಿಭಿನ್ನ ಕ್ರೀಡೆಗಳಲ್ಲಿ ತನ್ನ ದೇಶ ಪ್ರತಿನಿಧಿಸಿದ ಆಸೀಸ್ನ ಕೆಲವೇ ಕ್ರೀಡಾಪಟುಗಳಲ್ಲಿ ಒಬ್ಬರು. ಕ್ರಿಕೆಟ್ಗೆ ನಿವೃತ್ತಿ ಘೋಷಿಸದಿದ್ದರೂ ಲೆಜೆಂಡ್ ಪಟ್ಟ ತನ್ನದಾಗಿಸಿಕೊಂಡಿರುವ ಪೆರಿ, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಯಾವುದೇ ಇರಲಿ ವಿಶ್ವ ಶ್ರೇಷ್ಠ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಾರೆ. ಎಲ್ಲಿಸ್ ಪೆರಿ, ತನ್ನ ವೃತ್ತಿ ಬದುಕಿನಲ್ಲಿ 6 ಟಿ20 ವಿಶ್ವಕಪ್, 2 ಏಕದಿನ ವಿಶ್ವಕಪ್ ಗೆದ್ದಿದ್ದಾರೆ. ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳ ಸರಮಾಲೆಯನ್ನೇ ಸೃಷ್ಟಿಸಿರುವ ಪೆರಿ (Ellyse Perry Birthday) ಇಂದು (ನವೆಂಬರ್ 3) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಂದು ಅವರು 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.