Latest Kannada Nation & World
ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿ ಕೆಟ್ಟ ಕಾನ್ಸ್ಟಾಸ್, ಜಸ್ಪ್ರೀತ್ ಬುಮ್ರಾ ತಿರುಗೇಟಿಗೆ ಗಪ್ಚುಪ್, ದಿನದ ಕೊನೆಯಲ್ಲಿ ಹೈಡ್ರಾಮ, VIDEO

ಇಷ್ಟಕ್ಕೂ ಆಗಿದ್ದೇನು?
ಸಿಡ್ನಿ ಟೆಸ್ಟ್ನ ಮೊದಲ ದಿನದಾಟ ಮುಕ್ತಾಯಕ್ಕೆ ಇನ್ನೊಂದು ಓವರ್ ಬಾಕಿ ಉಳಿದಿತ್ತು. ಬುಮ್ರಾ ಬೌಲಿಂಗ್ ಮಾಡಲು ಬಂದರು. ಈ ಓವರ್ನಲ್ಲಿ ಮೊದಲ 3 ಎಸೆತಗಳನ್ನು ಎದುರಿಸಿದ್ದ ಕಾನ್ಸ್ಟಾಸ್, 3ನೇ ಎಸೆತದಲ್ಲಿ 1 ರನ್ ಪಡೆದು ನಾನ್ಸ್ಟ್ರೈಕ್ಗೆ ಬಂದರು. ಬಳಿಕ 4 ಮತ್ತು 5ನೇ ಎಸೆತವನ್ನು ಎದುರಿಸಿದ ಖವಾಜ, ರನ್ ಗಳಿಸಲು ವಿಫಲರಾದರು. ಆಗ ದಿನದ ಕೊನೆಯ ಎಸೆತವನ್ನು ಬೌಲ್ ಮಾಡಲು ಬುಮ್ರಾ ಮುಂದಾದರು. ಆದರೆ ಖವಾಜ, ಬ್ಯಾಟಿಂಗ್ಗೆ ಇನ್ನೂ ಸಿದ್ದವಾಗಿರಲಿಲ್ಲ. ಹಾಗಂತ ಬುಮ್ರಾ ಯಾವುದೇ ಕೋಪ ಮಾಡಿಕೊಂಡಿರಲಿಲ್ಲ. ಆದರೆ, ಮತ್ತೆ ಬೌಲ್ ಮಾಡಲು ಮುಂದಾದಾಗಲೂ ಖವಾಜ ಸಿದ್ದರಿರಲಿಲ್ಲ. ಈ ಘಟನೆ ಬುಮ್ರಾ ಕೋಪಕ್ಕೆ ಕಾರಣವಾಯಿತು.