Latest Kannada Nation & World
89 ರನ್ ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್; ಗಬ್ಬಾ ಟೆಸ್ಟ್ ಗೆಲುವಿಗೆ ಭಾರತಕ್ಕೆ 275 ರನ್ ಗುರಿ
ಮೆಕ್‌ಸ್ವೀನ್, ಖವಾಜಾ, ಲಬುಶೇನ್, ಮಿಚೆಲ್ ಮಾರ್ಷ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಟ್ರಾವಿಟ್ ಹೆಡ್ 17 ರನ್ ಗಳಿಸಿದರು. ಕೊನೆಯಲ್ಲಿ ನಾಯಕ ಕಮಿನ್ಸ್ 22 ರನ್ ಸಿಡಿಸಿದರು. ಅವರು ಔಟಾಗುತ್ತಿದ್ದಂತೆಯೇ ಆಸೀಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ ತಂಡವು ಕೊನೆಯ ಇನ್ನಿಂಗ್ಸ್ ಆರಂಭಿಸಿದ್ದು 2.1 ಓವರ್ ಆಗುವಷ್ಟರಲ್ಲಿ ಮತ್ತೆ ಮಳೆ ಅಡ್ಡಿಯಾಯ್ತು. ಭಾರತದ ವಿಕೆಟ್ ಕಳೆದುಕೊಳ್ಳದೆ 8 ರನ್ ಗಳಿಸಿದ್ದು, ಇನ್ನೂ ಗುರಿ ದೂರವಿದೆ.