Latest Kannada Nation & World
97 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಮಿರ್ ರಿಜ್ವಿ; ದೇಶೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಡಬಲ್ ಸೆಂಚುರಿ ಇದು!
ಅಭಿಷೇಕ್ ಪೋರೆಲ್ ಅಬ್ಬರ
ವಿಜಯ್ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ಡೆಲ್ಲಿ ವಿರುದ್ಧದ ಬೆಂಗಾಲ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಎಡಗೈ ಬ್ಯಾಟ್ಸ್ಮನ್ ಅಭಿಷೇಕ್ ಪೊರೆಲ್, 130 ಎಸೆತಗಳಲ್ಲಿ 170 ರನ್ ಸಿಡಿಸಿದ್ದಾರೆ. ಪೊರೆಲ್ ಇನ್ನಿಂಗ್ಸ್ನಲ್ಲಿ 18 ಬೌಂಡರಿ, 7 ಸಿಕ್ಸರ್ಗಳಿದ್ದವು ಎಂಬುದು ವಿಶೇಷ. ಕ್ರೀಸ್ಗೆ ಬಂದ ಕೂಡಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದ ಪೊರೆಲ್, ಅಭಿಷೇಕ್ ಆರ್ಭಟಕ್ಕೆ ಬ್ರೇಕ್ ಹಾಕಲು ಡೆಲ್ಲಿಗೆ ಹೆಣಗಾಡಿತು. ಈ ಯುವ ಬ್ಯಾಟರ್ ಸುನಾಮಿ ಬ್ಯಾಟಿಂಗ್ಗೆ ದೆಹಲಿ ಬೌಲರ್ಗಳು ಸುಸ್ತಾದರು. ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ, 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಇದರೊಂದಿಗೆ ಬೆಂಗಾಲ್ ಕೇವಲ 41.3 ಓವರ್ಗಳಲ್ಲಿ 274 ರನ್ ಗಳಿಸಿ ಗೆದ್ದು ಬೀಗಿತು. ಈ ಪೈಕಿ 170 ರನ್ ಪೊರೆಲ್ ಗಳಿಸಿದ್ದು.