Latest Kannada Nation & World
ಮನೆಯವರ ಸ್ವಾರ್ಥಕ್ಕೆ ಸುಬ್ಬು ಆಸೆ–ಕನಸು ಬಲಿ, ಶ್ರಾವಣಿ ಪ್ರೀತಿಸಿದ ಹುಡುಗನ ಹೆಸರು ಕೇಳಿ ಅಜ್ಜಿ ಕೆಂಡಾಮಂಡಲ; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಡಿಸೆಂಬರ್ 30ರ ಸಂಚಿಕೆಯಲ್ಲಿ ಇಂದ್ರಮ್ಮನವರು ಸುಬ್ಬು ಶ್ರೀವಲ್ಲಿಯನ್ನು ಮದುವೆಯಾಗಲೇಬೇಕು ಎಂದು ಹಠ ಹಿಡಿದವರಂತೆ ಮಾತನಾಡುತ್ತಾರೆ. ಇಂದ್ರಮ್ಮ ಮಾತ್ರವಲ್ಲದೇ ಇಂದ್ರಮ್ಮನ ತಂಗಿ, ಸುಬ್ಬು ಅಕ್ಕ ಧನಲಕ್ಷ್ಮೀ, ತಾಯಿ ವಿಶಾಲಾಕ್ಷಿ, ತಂಗಿ ವರಲಕ್ಷ್ಮೀ ಎಲ್ಲರೂ ಸುಬ್ಬು ಬಳಿ ಶ್ರೀವಲ್ಲಿಯನ್ನ ಮದುವೆಯಾಗು ಎಂದು ಒತ್ತಾಯ ಮಾಡುತ್ತಾರೆ. ಎಲ್ಲರೂ ಒಂದೊಂದು ಕಾರಣ ಹೇಳಿ ಶ್ರೀವಲ್ಲಿಯನ್ನ ಮದುವೆಯಾಗು ಎಂದು ಒತ್ತಾಯ ಮಾಡುವುದು ಕೇಳಿ ಸುಬ್ಬುಗೆ ತಲೆ ಚಿಟ್ಟು ಹಿಡಿದಂತಾಗುತ್ತೆ. ಅದೇ ಒತ್ತಡದಲ್ಲಿ ಸುಬ್ಬು ‘ಅಯ್ಯೋ ಎಲ್ಲರೂ ಒಮ್ಮೆ ಸುಮ್ನೆ ಇರ್ತೀರಾ‘ ಅಂತ ಒಂದೇ ಉಸಿರಿಗೆ ಹೇಳುತ್ತಾನೆ. ಆಗ ತಂದೆ ಪದ್ಮನಾಭ ‘ನನ್ನ ಮಗನಿಗೆ ಸ್ವಲ್ಪ ಸಮಯ ಕೊಡಿ, ಎಲ್ಲರೂ ಹೀಗೆ ನಿಮ್ಮ ನೇರಕ್ಕೆ ಹೇಳಿದ್ರೆ ಹೇಗೆ, ಅವನು ಒಂದು ನಿಮಿಷ ನೀರು ಕುಡಿದು ಸುಧಾರಿಸಿಕೊಳ್ಳುತ್ತಾನೆ. ಇರಿ ನಾನು ಅವನಿಗೆ ನೀರು ಕೊಟ್ಟು ಬರುತ್ತೇನೆ‘ ಎಂದು ಮಗನನ್ನು ಅಡುಗೆಮನೆಗೆ ಕರೆದುಕೊಂಡು ಹೋಗುತ್ತಾರೆ.