Latest Kannada Nation & World
ಚಹಲ್ ಲೆಗ್ ಸ್ಪಿನ್ಗೆ ಯುವತಿ ಕ್ಲೀನ್ಬೋಲ್ಡ್, ಈಕೆಯೇ ಧನಶ್ರೀ ಜತೆ ವಿಚ್ಛೇದನಕ್ಕೆ ಕಾರಣವಾ? ಯಾರು ಈ ಮಿಸ್ಟರಿ ಗರ್ಲ್? VIDEO

ಮುಂಬೈನ ಜುಹುನ ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್ನಲ್ಲಿ ಒಬ್ಬ ಯುವತಿಯೊಂದಿಗೆ ಚಹಲ್ ಕಾಣಿಸಿಕೊಂಡಿದ್ದಾರೆ. ಬಳಿಕ ಅದೇ ಯುವತಿಯೊಂದಿಗೆ ಚಹಲ್ ಕಾರಿನಲ್ಲೂ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮದ ಕ್ಯಾಮರಾಗಳು ಅವರನ್ನು ಸೆರೆ ಹಿಡಿಯಲು ಪ್ರಯತ್ನಿಸಿದಾಗ, ಈ ಭಾರತೀಯ ಕ್ರಿಕೆಟಿಗ ತನ್ನ ಮುಖ ಮರೆಮಾಚಿದ್ದಾರೆ. ಇದೀಗ ಧನಶ್ರೀ-ಚಹಲ್ ವಿಚ್ಛೇದನದ ಸುದ್ದಿಗೆ ಈ ಮಿಸ್ಟರಿ ಗರ್ಲ್ ಕಾರಣವೇ ಎಂಬ ಚರ್ಚೆಗಳು ಆರಂಭಗೊಂಡಿವೆ. ಆದರೆ ಆ ಮಿಸ್ಟರಿ ಗರ್ಲ್ ಯಾರು, ಎಲ್ಲಿಯವರು, ಚಹಲ್ ಜೊತೆಗೆ ಇದ್ದಿದ್ದೇಕೆ ಎನ್ನುವ ಮಾಹಿತಿ ಎಲ್ಲಿಯೂ ಬಹಿರಂಗಗೊಂಡಿಲ್ಲ. ಅಲ್ಲದೆ, ಅಭಿಮಾನಿಗಳು ಸಹ ಬಗೆಬಗೆ ಕಾಮೆಂಟ್ಗಳ ಮೂಲಕ ಪ್ರತಿಕ್ರಿಯಿಸಿ, ತರಾಟೆ ತೆಗೆದುಕೊಂಡಿದ್ದಾರೆ. ವಿಡಿಯೋ ಒಂದನ್ನು bollytellybuzz ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.