ಅಪ್ಪನಿಗೆ ನೋವಾಗುತ್ತೆ, ಮದುವೆ ನಿಲ್ಲಿಸಬೇಡ ಎಂದು ಅಜ್ಜಿಗೆ ಹೇಳಿದ ಶ್ರಾವಣಿ ಮುಂದಿನ ನಡೆ ಏನು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಜನವರಿ 15ರ ಸಂಚಿಕೆಯಲ್ಲಿ ಮನೆಯೊಳಗೆ ಅದರಲ್ಲೂ ತನ್ನ ಕೋಣೆಯೊಳಗೆ ಬಂದ ಅಮ್ಮನನ್ನು ಕಂಡು ಸಂತಸಗೊಂಡ ಶ್ರಾವಣಿ ಅಳುತ್ತಾ ತಬ್ಬಿಕೊಂಡು ತನ್ನ ಜೀವನದಲ್ಲಿ ನಡೆದಿರುವುದನ್ನೆಲ್ಲಾ ಹೇಳುತ್ತಾಳೆ. ತಾನು ಸುಬ್ಬುವನ್ನು ಪ್ರೀತಿಸಿದ್ದು, ಆದರೆ ಅಪ್ಪನ ಮಾತನ್ನ ತಪ್ಪಾಗಿ ಅರ್ಥೈಸಿಕೊಂಡು ಮದನ್ ಜೊತೆ ಮದುವೆಗೆ ಒಪ್ಪಿದ್ದು, ಫೋಟೊಶೂಟ್‌ಗೆ ಹೋಗುವವರೆಗೂ ಹುಡುಗ ಸುಬ್ಬುವೇ ಎಂದು ಅಂದುಕೊಂಡಿದ್ದು ಎಲ್ಲವನ್ನೂ ಹೇಳುತ್ತಾಳೆ. ಜೊತೆ ಸುಬ್ಬು ಇಲ್ಲದೇ ತಾನು ಬದುಕಲು ಸಾಧ್ಯವೇ ಇಲ್ಲ, ಹಾಗಂತ ಅಪ್ಪನ ಮನಸ್ಸು ನೋಯಿಸೋದು ಇಷ್ಟ ಇಲ್ಲ ಅಂತ ಕಣ್ಣೀರಿಡುತ್ತಾಳೆ. ಅಮ್ಮನ ಮಡಿಲಲ್ಲಿ ಮಲಗಿ ಮಗುವಾಗ ಶ್ರಾವಣಿಗೆ ಧೈರ್ಯ ಹೇಳುವ ನಂದಿನಿ ನಿಜವಾದ ಪ್ರೀತಿಗೆ ಎಂದಿಗೂ ಸೋಲಾಗುವುದಿಲ್ಲ. ನಿನ್ನ ಪ್ರೀತಿ ನಿಜವಾಗಿದ್ದರೆ ಖಂಡಿತ ಅದು ಗೆಲ್ಲುತ್ತದೆ. ನಿನ್ನ ಜೊತೆ ನಾನಿದ್ದೀನಿ ಕಂದಾ, ನಾನು ಯಾವಾಗಲೂ ನಿನ್ನೊಂದಿಗೇ ಇರುತ್ತೇನೆ‘ ಎಂದು ಧೈರ್ಯ ತುಂಬುತ್ತಾಳೆ. ನೀನು ಈಗ ಬಂದಿದ್ದಿಯಲ್ಲಮ್ಮ, ಇನ್ನು ನನನ್ನು ಬಿಟ್ಟು ಎಲ್ಲಿಗೂ ಹೋಗಬೇಡ, ನೀನು ನನ್ನ ಜೊತೆಗೆ ಇರಬೇಕು, ನೀನು ಎಲ್ಲೂ ಹೋಗೊಲ್ಲ ಅಲ್ವಾ ಅಮ್ಮಾ ಎನ್ನುತ್ತಾ ತಾಯಿಯ ಮಡಿಲಲ್ಲಿ ಮಗಲುವ ಶ್ರಾವಣಿಗೆ ತಕ್ಷಣಕ್ಕೆ ಎಚ್ಚರವಾಗುತ್ತದೆ. ಆದರೆ ಅಲ್ಲಿ ನೋಡಿದರೆ ಅವಳ ಅಮ್ಮ ಇರುವುದಿಲ್ಲ. ಆಗ ತಾನು ಕಂಡಿದ್ದು ಕನಸು ಎಂಬುದು ಅರಿವಾದರೂ ತನ್ನ ತಾಯಿ ತನ್ನ ಜೊತೆಗೆ ಇದ್ದಾಳೆ ಎನ್ನುವುದು ಶ್ರಾವಣಿಗೆ ಖುಷಿ ನೀಡುವ ವಿಚಾರವಾಗಿರುತ್ತದೆ.