Latest Kannada Nation & World
ಲಗ್ಗೇಜ್ ಸಹಿತ ಮನೆಗೆ ವಾಪಸ್ ಬಂದೇ ಬಿಟ್ಟ ತಾಂಡವ್, ಕನಸೋ ನಿಜವೋ ತಿಳಿಯದೆ, ಕೈ ಚಿವುಟಿಕೊಂಡ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ತಾಂಡವ್ ವಾಪಸ್ ಬಂದಿದ್ದನ್ನು ನೋಡಿ ಶಾಕ್ ಆದ ಮನೆಯವರು
ತಾಂಡವ್‌ನನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದು ಕನಸೋ, ನಿಜವೋ ಎಂದು ತಿಳಿಯದೆ ಕುಸುಮಾ ಕೈ ಚಿವುಟುವಂತೆ ಪೂಜಾಗೆ ಹೇಳುತ್ತಾಳೆ. ತಾಂಡವ್ ನಿಜವಾಗಿಯೂ ಮನೆಗೆ ವಾಪಸ್ ಬಂದಿರುವ ವಿಚಾರ ತಿಳಿದು ಸುನಂದಾ, ಕುಸುಮಾ ಅವನನ್ನು ಒಳಗೆ ಬರಮಾಡಿಕೊಳ್ಳುತ್ತಾರೆ. ತಾಂಡವ್‌ಗೆ ಜ್ಯೂಸ್ ಮಾಡಿಕೊಡುವಂತೆ ಸುನಂದಾ ಮಗಳಿಗೆ ಹೇಳುತ್ತಾಳೆ. ಅವರಿಬ್ಬರ ವರ್ತನೆ ಕಂಡು ಭಾಗ್ಯಾಗೆ ಇರುಸುಮುರುಸಾಗುತ್ತದೆ. ಮಗ ಮನೆಗೆ ಬಂದಿರುವ ಸುದ್ದಿ ಕೇಳಿ ಧರ್ಮರಾಜ್ ಕೆಳಗೆ ಬರುತ್ತಾರೆ. ನಾನು ಯಾವುದೋ ವಿಷ ಗಳಿಗೆಯಲ್ಲಿ ಮನೆ ಬಿಟ್ಟು ಹೋದೆ, ಅದರೆ ಅಪ್ಪ-ಅಮ್ಮ, ನಿಮ್ಮಿಬ್ಬರನ್ನು ಬಿಟ್ಟು ಇರಲು ನನಗೆ ಆಗುತ್ತಿಲ್ಲ, ನನಗೆ ನನ್ನದೇ ಆದ ಕೆಲವು ಜವಾಬ್ದಾರಿಗಳಿವೆ ಅದಕ್ಕೆ ವಾಪಸ್ ಬಂದೆ ಎಂದು ಮೊಸಳೆ ಕಣ್ಣೀರು ಹರಿಸುತ್ತಾನೆ. ತಾಂಡವ್ ಮಾಡುತ್ತಿರುವುದು ನಾಟಕ ಎಂದು ಧರ್ಮರಾಜ್, ಭಾಗ್ಯಾಗೆ ಗೊತ್ತಾಗುತ್ತದೆ, ಆದರೆ ಕುಸುಮಾ, ಸುನಂದಾ ಮಾತ್ರ ತಾಂಡವ್ ಪರ ನಿಲ್ಲುತ್ತಾರೆ.